Google
 Google ಸಹಾಯ ಕೇಂದ್ರ
Google ಹೋಮ್

Google  ಬಗ್ಗೆ

ಸಹಾಯ  ಕೇಂದ್ರ
   ಹುಡುಕಾಟದ  ಮೂಲ ವಿಷಯಗಳು
  ವಿಸ್ತೃತ ಹುಡುಕಾಟ
   ಹುಡುಕಾಟದ ಫಲಿತಾಂಶಗಳ ಪುಟ
  ಸಂಯೋಜನಾ ಆದ್ಯತೆಗಳು


ಹುಡುಕಾಟದ ವೈಶಿಷ್ಟ್ಯಗಳು
ಪದ ಪರೀಕ್ಷಕ, ಸ್ಟಾಕ್ ಕೋಟ್‌ಗಳು &ಇನ್ನಷ್ಟು

ಸೇವೆಗಳು & ಸಾಧನಗಳು
ಸ್ಥಳೀಯ ಹುಡುಕಾಟ, ಪ್ರೊಡಕ್ಟ್ ಹುಡುಕಾಟ, ಸುದ್ದಿಗಳು & ಇನ್ನಷ್ಟು

ಈ ಸೈಟಿನಲ್ಲಿ ಹುಡುಕಿರಿ:

  Google ವೆಬ್ ಹುಡುಕಾಟದ ವೈಶಿಷ್ಟ್ಯಗಳು

ಬಿಲಿಯಾಂತರ ವೆಬ್ ಪುಟಗಳಿಗೆ ಸುಲಭ ಪ್ರವೇಶವನ್ನು ಒದಗಿಸುವುದರ ಜೊತೆಗೆ, ನೀವು ಏನನ್ನು ಹುಡುಕುತ್ತಿದ್ದೀರೋ, ಅದನ್ನೇ ನಿಖರವಾಗಿ ಪಡೆಯಲು ಸಹಾಯ ಮಾಡುವಂತಹ ವಿಶೇಷ ವೈಶಿಷ್ಟ್ಯಗಳನ್ನು Google ಹೊಂದಿದೆ. ಒಂದು ನಿರ್ಧಿಷ್ಠ ವೈಶಿಷ್ಟ್ಯದ ಬಗ್ಗೆ ಇನ್ನಷ್ಟು ತಿಳಿಯಲು, ಅದರ ಮೇಲೆ ಕ್ಲಿಕ್ ಮಾಡಿ.

  ಪುಸ್ತಕ ಹುಡುಕಾಟ

ಪುಸ್ತಕಗಳ ಸಂಪೂರ್ಣ ಪಠ್ಯವನ್ನು ಹುಡುಕಲು Google ಬಳಸಿ.

  ಸಂಗ್ರಹಿಸಿದ ಲಿಂಕ್‌ಗಳು

ನಾವು ಇಂಡೆಕ್ಸ್ ಮಾಡಿದಾಗ ಕಂಡಂತೆಯೇ ಕಾಣುವ ಪ್ರತೀ ಪುಟದ ಒಂದು ಚಿತ್ರಣವನ್ನು ನೋಡಿರಿ.

  ಕ್ಯಾಲ್ಕುಲೇಟರ್

ಗಣಿತ ಲೆಕ್ಕಗಳನ್ನು ಮಾಡಲು Google ಬಳಸಿ.

  ಹಣ ಪರಿವರ್ತನೆ

ಯಾವುದೇ ಹಣ ಪರಿವರ್ತನೆಯನ್ನು ಸುಲಭವಾಗಿ ಮಾಡಿ.

  ವ್ಯಾಖ್ಯಾನಗಳು

ವಿವಿಧ ಆನ್‌ಲೈನ್ ಮೂಲಗಳಿಂದ ಪದಕೋಶ ವ್ಯಾಖ್ಯಾನಗಳನ್ನು ಪಡೆಯಲು Google ಬಳಸಿ.

  ಕಡತ ವಿಧಗಳು

PDF ಮತ್ತು ಇತರ ದಾಖಲಾತಿಗಳನ್ನೂ ಒಳಗೊಂಡಂತೆ HTML ಅಲ್ಲದ ಮಾದರಿಗಳಿಗಾಗಿ ಹುಡುಕಿ.

  ಗ್ರೂಪ್ಸ್

ನಿಮ್ಮ ವೆಬ್ ಹುಡುಕಾಟದ ಫಲಿತಾಂಶಗಳಲ್ಲಿ ಸೂಕ್ತ Google ಗ್ರೂಪ್ಸ್‌ನ ಪೋಸ್ಟ್‌ಗಳನ್ನು ಸಹ ಪಡೆಯಿರಿ .

  ನಾನು ಅದೃಷ್ಟಶಾಲಿ

ನಮ್ಮ ಫಲಿತಾಂಶಗಳನ್ನು ದಾಟಿ, ನಿಮ್ಮ ಪ್ರಶ್ನೆಗೆ ಒದಗಿಸಲಾದ ಮೊದಲ ವೆಬ್ ಪುಟಕ್ಕೆ ಹೋಗಿ.

  ಚಿತ್ರಗಳು

ನಿಮ್ಮ ವೆಬ್ ಹುಡುಕಾಟದ ಫಲಿತಾಂಶಗಳಲ್ಲಿ ಸೂಕ್ತ ಚಿತ್ರಗಳನ್ನು ಪಡೆಯಿರಿ.

  ಸ್ಥಳೀಯ ಹುಡುಕಾಟ

ಯು.ಎಸ್., ಯು.ಕೆ., ಮತ್ತು ಭಾರತಗಳಲ್ಲಿ ಸ್ಥಳಿಯ ವ್ಯಾಪಾರಗಳು ಮತ್ತು ಸೇವೆಗಳನ್ನು ಹುಡುಕಿ.

  •• ಚಲನಚಿತ್ರಗಳು

ನಿಮ್ಮ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತಿರುವ ಚಲನಚಿತ್ರಗಳ ವಿಮರ್ಶೆ ಮತ್ತು ಪ್ರದರ್ಶನ ಸಮಯಗಳನ್ನು ತಿಳಿಯಲು Google ಬಳಸಿ.

  ಸಂಗೀತ ಹುಡುಕಾಟ

ವಿಶಾಲ ಶ್ರೇಣಿಯ ಸಂಗೀತ ಮಾಹಿತಿಗೆ ಶೀಘ್ರ ಪ್ರವೇಶ ಪಡೆಯಲು Google ಬಳಸಿ.

  ಪ್ರಮುಖ ಸುದ್ಧಿಗಳು

ಪ್ರಚಲಿತ ಸುದ್ಧಿಗಳೊಂದಿಗೆ ನಿಮ್ಮ ಹುಡುಕಾಟದ ಫಲಿತಾಂಶಗಳನ್ನು ವೃದ್ಧಿಸುತ್ತದೆ.

  ದೂರವಾಣಿ ಪುಸ್ತಕ

ಯು.ಎಸ್. ರಸ್ತೆ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕುರಿತ ಮಾಹಿತಿಯನ್ನು ಪಡೆಯಿರಿ.

  ಪ್ರೊಡಕ್ಟ್ ಹುಡುಕಾಟ

ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿರುವ ಒಂದು ಉತ್ಪನ್ನವನ್ನು ಹುಡುಕಲು, Google ಪ್ರೊಡಕ್ಟ್ ಹುಡುಕಾಟವನ್ನು ಬಳಸಿ.

  ಪ್ರ&ಉ

ನೇರವಾದ ಪ್ರಶ್ನೆಗಳಿಗೆ ಶೀಘ್ರ ಉತ್ತರ ಪಡೆಯಲು Google ಬಳಸಿ.

  ನಿಮ್ಮ ಹುಡುಕಾಟವನ್ನು ಉತ್ತಮಪಡಿಸಿ - ಹೊಸದು!

ನಿಮ್ಮ ಫಲಿತಾಂಶಗಳನ್ನು ಕೇಂದ್ರೀಕರಿಸಲು ಮತ್ತು ಅಭಿವೃದ್ಧಿಪಡಿಸಲು ನಿಮ್ಮ ಹುಡುಕಾಟಕ್ಕೆ ತಕ್ಷಣದ ಮಾಹಿತಿ ಮತ್ತು ಶೀರ್ಷಿಕೆ-ನಿಗದಿತ ಲಿಂಕ್‌ಗಳನ್ನು ಸೇರಿಸಿ.‍

  ಫಲಿತಾಂಶಗಳನ್ನು ಪಡೆಯುವುದು

ಫೈರ್‌ಫಾಕ್ಸ್‌ನಲ್ಲಿ ಹುಡುಕಾಟವನ್ನು ಕ್ಷಿಪ್ರವಾಗಿಸುತ್ತದೆ.

  ಸಂಖ್ಯೆಯ ಆಧಾರದಲ್ಲಿ ಹುಡುಕಿ

ಪ್ಯಾಕೇಜ್ ಟ್ರಾಕಿಂಗ್ ಮಾಹಿತಿ, ಯುಎಸ್ ಪೇಟೆಂಟ್‌ಗಳು ಮತ್ತು ವೈವಿಧ್ಯಮಯ ಆನ್‌ಲೈನ್ ಡೇಟಾಬೇಸ್‌ಗಳನ್ನು ಪ್ರವೇಶಿಸಲು Google ಬಳಸಿ.

  ಹೋಲುವ ಪುಟಗಳು

ಒಂದು ನಿರ್ದಿಷ್ಟ ಫಲಿತಾಂಶಕ್ಕೆ ಸಂಬಂಧಿಸಿದ ಪುಟಗಳನ್ನು ಪ್ರದರ್ಶಿಸುತ್ತದೆ.

  ಸೈಟ್   ಹುಡುಕಾಟ

ಒಂದು ನಿರ್ದಿಷ್ಟ ಸೈಟ್‌ಗೆ ನಿಮ್ಮ ಹುಡುಕಾಟವನ್ನುನಿರ್ಬಂಧಿಸಿ.

  ಪದ ಪರೀಕ್ಷಕ

ಪ್ರಶ್ನೆಗಳಿಗೆ ಪರ್ಯಾಯ ಶಬ್ದಗಳನ್ನು ಒದಗಿಸುತ್ತದೆ.

  ಸ್ಟಾಕ್ ಮತ್ತು ಫಂಡ್ ಕೋಟ್‌ಗಳು

ಪ್ರಸ್ತುತ ಸ್ಟಾಕ್ ಮತ್ತು ಮ್ಯೂಚುವಲ್ ಫಂಡ್ ಕೋಟ್‌ಗಳನ್ನು ಹಾಗೂ ಮಾಹಿತಿಯನ್ನು ಪಡೆಯಲು Google ಬಳಸಿ.

  ರಸ್ತೆ ನಕ್ಷೆಗಳು

ಯು.ಎಸ್. ರಸ್ತೆ ನಕ್ಷೆಗಳನ್ನು ಕಂಡುಹಿಡಿಯಲು Google ಬಳಸಿ.

  ಪ್ರಯಾಣ ಮಾಹಿತಿ

.ಭಾರತದಲ್ಲಿ ಒಂದು ಏರ್‌ಲೈನ್ ಹಾರಾಟದ ಸ್ಥಿತಿಯನ್ನು ಅಥವಾ ವಿಮಾನನಿಲ್ದಾಣದಲ್ಲಿನ ವಿಳಂಬ ಮತ್ತು ಹವಾಮಾನ ಪರಿಸ್ಥಿತಿಗಳನ್ನು ತಿಳಿದುಕೊಳ್ಳಿ.

  ಹವಾಮಾನ

ಯು.ಎಸ್.ನಲ್ಲಿನ ಯಾವುದೇ ಪ್ರದೇಶದ ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಮತ್ತು ಮುನ್ಸೂಚನೆಯನ್ನು ತಿಳಿದುಕೊಳ್ಳಿ.

  • ವೆಬ್ ಪುಟದ ಭಾಷಾಂತರ 

ಇತರ ಭಾಷೆಗಳ ವೆಬ್ ಪುಟಗಳಿಗೆ ನಿಮಗೆ ಪ್ರವೇಶವನ್ನು ಒದಗಿಸುತ್ತದೆ.

  ನಿಮಗೆ ಯಾರು ಲಿಂಕ್‌ಗಳನ್ನು ಹೊಂದಿದ್ದಾರೆ?

ಒಂದು ನಿರ್ದಿಷ್ಟ URLಗೆ ಕೊಂಡೊಯ್ಯುವ ಪುಟಗಳನ್ನು ಹುಡುಕಿ.


ಪುಸ್ತಕ ಹುಡುಕಾಟ

ಮುದ್ರಿಸು ಪುಸ್ತಕಗಳನ್ನು ಆನ್‌ಲೈನ್‌ಗೆ ತರುವ ಮೂಲಕ Google, ಪ್ರಪಂಚದ ಮಾಹಿತಿಯು ಆನ್‌ಲೈನ್‌ಗೆ ಬರುವಲ್ಲಿ ನೆರವಾಗುತ್ತಿದೆ. ನಿಮ್ಮ ಹುಡುಕಾಟ ಪಠ್ಯಗಳು, ನಮ್ಮ Google ಪುಸ್ತಕ ಹುಡುಕಾಟ ಇಂಡೆಕ್ಸ್‌ನಲ್ಲಿರುವ ಪುಸ್ತಕಗಳು ಹೊಂದಿರುವ ವಿಷಯಗಳಿಗೆ ಹೊಂದಾಣಿಕೆಯಾದಲ್ಲಿ, ನೀವು ಆ ಪುಸ್ತಕಗಳ ಲಿಂಕ್‌ಗಳನ್ನು ಫಲಿತಾಂಶ ಪುಟದ ಮೇಲ್ಭಾಗದಲ್ಲಿ, ಪುಸ್ತಕ ಫಲಿತಾಂಶಗಳ ತಲೆಬರಹದ ಅಡಿಯಲ್ಲಿ ನೋಡುತ್ತೀರಿ. ಯಾವುದಾದರೂ ಪುಸ್ತಕ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿರಿ ಮತ್ತು ನೀವು ಆ ಪುಸ್ತಕದಲ್ಲಿ ನಿಮ್ಮ ಹುಡುಕಾಟದ ಪಠ್ಯವಿರುವ ಪುಟವನ್ನು , ಜೊತೆಗೆ ಶೀರ್ಷಿಕೆಯ ಬಗ್ಗೆ ಇತರ ಮಾಹಿತಿ ಸಹ ಇರುವುದನ್ನು ನೋಡುತ್ತೀರಿ. "Buy this Book" ಎಂಬುದರ ಕೆಳಗಿರುವ ಲಿಂಕ್‌ಗಳಲ್ಲಿ ಒಂದನ್ನು ಕ್ಲಿಕ್ ಮಾಡಿದರೆ, ನಿಮ್ಮನ್ನು ನೇರವಾಗಿ ಆ ಪುಸ್ತಕವನ್ನು ಮಾರುತ್ತಿರುವ ಒಂದು ಆನ್‌ಲೈನ್ ಪುಸ್ತಕ ಮಳಿಗೆಗೆ ಕೊಂಡೊಯ್ಯುತ್ತದೆ..

ಉದಾಹರಣೆಗಾಗಿ:  

ಸಂಗ್ರಹಿಸಿದ ಲಿಂಕ್‌ಗಳು

Google ವೆಬ್ ಮೂಲಕ ಹಾದುಹೋಗುವಾಗ ತಾನು ಪರೀಕ್ಷಿಸಿದ ಪ್ರತೀ ಪುಟದ ಒಂದು ಚಿತ್ರವನ್ನು ತೆಗೆದುಕೊಳ್ಳುತ್ತದೆ ಮತ್ತು ಒಂದು ವೇಳೆ ಮೂಲ ಪುಟವು ಅಲಭ್ಯವಾದಲ್ಲಿ ಇವುಗಳನ್ನು ಬ್ಯಾಕ್-ಅಪ್‌ನಂತೆ ಸಂಗ್ರಹಿಸುತ್ತದೆ. ನೀವು "ಸಂಗ್ರಹಿಸಿದ" ಲಿಂಕ್‌ನ ಮೇಲೆ ಕ್ಲಿಕ್ ಮಾಡಿದಲ್ಲಿ, ನಾವು ಇಂಡೆಕ್ಸ್ ಮಾಡಿದಾಗ ಕಂಡಂತಹ ರೀತಿಯಲ್ಲಿ ನೀವು ವೆಬ್ ಪುಟವನ್ನು ಕಾಣುತ್ತೀರಿ. ಒಂದು ಪುಟವು ನಿಮ್ಮ ಪ್ರಶ್ನೆಗೆ ಸೂಕ್ತವಾದ ಪುಟವೇ ಎಂಬುದನ್ನು ತೀರ್ಮಾನಿಸಲು Google ಈ ಸಂಗ್ರಹಿಸಿದ ಕಂಟೆಂಟನ್ನು ಉಪಯೋಗಿಸುತ್ತದೆ.

ಸಂಗ್ರಹಿಸಿದ ಪುಟವನ್ನು ಪ್ರದರ್ಶಿಸಿದಾಗ, ಆ ಪುಟದ ಮೇಲ್ಗಡೆಯಲ್ಲಿ, ಈ ಪುಟವು ಮೂಲ ಪುಟದ ಇತ್ತೀಚಿನ ಆವೃತ್ತಿಯಾಗಿಲ್ಲದಿರಬಹುದು ಎಂಬುದನ್ನು ನೆನಪಿಸುವ ಒಂದು ತಲೆಬರಹವನ್ನು ಹಾಕಲಾಗಿರುತ್ತದೆ. ನಿಮ್ಮ ಪುಟವು ಏಕೆ ಸೂಕ್ತವಾಗಿದೆ ಎಂಬುದನ್ನು ವೀಕ್ಷಿಸಲು ಅನುವಾಗುವಂತೆ ಸಂಗ್ರಹಿಸಿದ ಆವೃತ್ತಿಯಲ್ಲಿ ನಿಮ್ಮ ಪ್ರಶ್ನೆಗೆ ಸರಿಹೊಂದುವ ಪಠ್ಯವನ್ನು ಹೈಲೈಟ್ ಮಾಡಲಾಗಿರುತ್ತದೆ.

ಇಂಡೆಕ್ಸ್ ಮಾಡದಿರುವ ಸೈಟ್‌ಗಳಲ್ಲಿ ಹಾಗೂ ತಮ್ಮ ಕಂಟೆಂಟನ್ನು ಸಂಗ್ರಹಿಸದಿರುವಂತೆ ಕೋರಿರುವ ಮಾಲೀಕರ ಸೈಟ್‌ಗಳಲ್ಲಿ "ಸಂಗ್ರಹಿಸಿದ" ಲಿಂಕ್‌ಗಳು ಕಂಡುಬರುವುದಿಲ್ಲ,

Google
... ನಮ್ಮಲ್ಲಿ ಜಾಹೀರಾತು ನೀಡಿ - ವ್ಯಾಪಾರೀ ಪರಿಹಾರಗಳು - ಸೇವೆಗಳು & ಸಾಧನಗಳು - ಉದ್ಯೋಗಗಳು,
ಪ್ರೆಸ್, & ಸಹಾಯ ©2004 Google - 4,285,199,774 ವೆಬ್‍ಪುಟಗಳನ್ನು ಹುಡುಕುತ್ತಿದ್ದೇವೆ.
www.google.com/ - 3k - ನವೆಂ 26, 2004 -
» ಸಂಗ್ರಹಿಸಿದ « - ಹೋಲುವ  ಪುಟಗಳು



ಕ್ಯಾಲ್ಕುಲೇಟರ್

ಕ್ಯಾಲ್ಕುಲೇಟರ್ Google‌ನ ಬಿಲ್ಟ್‌-ಇನ್ ಕ್ಯಾಲ್ಕುಲೇಟರನ್ನು ಉಪಯೋಗಿಸಲು, ನೀವು ಮಾಡಬೇಕಿರುವ ಲೆಕ್ಕವನ್ನು ಹುಡುಕಾಟದ ಚೌಕದಲ್ಲಿ ನಮೂದಿಸಿ ಎಂಟರ್ ಕೀ ಒತ್ತಿರಿ ಅಥವಾ Google ಹುಡುಕಾಟದ ಗುಂಡಿಯನ್ನು ಕ್ಲಿಕ್ ಮಾಡಿ. ಈ ಕ್ಯಾಲ್ಕುಲೇಟರ್ ಸಾಮಾನ್ಯ ಲೆಕ್ಕ, ಹೆಚ್ಚು ಸಂಕೀರ್ಣವಾದ ಲೆಕ್ಕ, ಅಳತೆ ಮತ್ತು ಪರಿವರ್ತನೆಗಳ ಘಟಕಗಳು ಮತ್ತು ಭೌತಶಾಸ್ತ್ರದ ನಿಯತಾಂಕಗಳನ್ನು ಪರಿಹರಿಸಬಲ್ಲದ್ದಾಗಿದೆ. ಈ ಕೆಳಗಿನ ಯಾವುದಾದರೂ ಒಂದು ಲೆಕ್ಕವನ್ನು ಪ್ರಯತ್ನಿಸಿರಿ ಅಥವಾ ನಿಮ್ಮದೇ ಆದ ಲೆಕ್ಕವನ್ನು ಪರಿಹರಿಸಲು ನಮ್ಮ ಸಂಪೂರ್ಣ ಸೂಚನೆಗಳನ್ನು ನೋಡಿರಿ.

ಇಲ್ಲಿ ಉದಾಹರಿಸಿರುವ ಪ್ರಶ್ನೆಗಳು ಈ ಹೊಸ ವೈಶಿಷ್ಟ್ಯದ ಉಪಯೋಗ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ:

ಉದಾಹರಣೆ:  


ಹಣ ಪರಿವರ್ತನೆ

Google‌ನ ಬಿಲ್ಟ್‌-ಇನ್ ಹಣ ಪರಿವರ್ತಕವನ್ನು ಉಪಯೋಗಿಸಲು, ನೀವು ಮಾಡಬೇಕಿರುವ ಪರಿವರ್ತನೆಯನ್ನು ಹುಡುಕಾಟ ಚೌಕದಲ್ಲಿ ನಮೂದಿಸಿ "ಎಂಟರ್" ಕೀ ಒತ್ತಿರಿ ಅಥವಾ Google ಹುಡುಕಾಟ ಗುಂಡಿಯನ್ನು ಕ್ಲಿಕ್ ಮಾಡಿ

ಇಲ್ಲಿ ಕೆಲವು ಉದಾಹರಣೆಯ ಪ್ರಶ್ನೆಗಳನ್ನು ನೀಡಲಾಗಿದೆ:

ಉದಾಹರಣೆ:  


ವ್ಯಾಖ್ಯಾನಗಳು

ಒಂದು ಪದ ಅಥವಾ ವಾಕ್ಯದ ವ್ಯಾಖ್ಯಾನವನ್ನು ಪಡೆಯಲು, ಕೇವಲ "Define" ಎಂದು ನಮೂದಿಸಿ ಒಂದು ಸ್ಥಳ ಬಿಟ್ಟು ನಂತರ ನೀವು ವ್ಯಾಖ್ಯಾನ ಬಯಸುವ ಪದ(ಗಳನ್ನು) ನಮೂದಿಸಿ. ವೆಬ್‌ನಲ್ಲಿ ಒಂದು ಪದ ಅಥವಾ ನುಡಿಗಟ್ಟಿನ ವ್ಯಾಖ್ಯಾನ ದೊರಕಿದಲ್ಲಿ, Google , ಆ ಮಾಹಿತಿಯನ್ನು , ನಿಮ್ಮ ಹುಡುಕಾಟದ ಫಲಿತಾಂಶಗಳಲ್ಲಿ ಮೊದಲು ಪ್ರದರ್ಶಿಸುತ್ತದೆ.

ಉದಾಹರಣೆ:  
ನೀವು "define:" ಎಂಬ ವಿಶೇಷ ಆಪರೇಟರನ್ನು ಒಳಪಡಿಸುವ ಮೂಲಕವಾಗಿ ವಿವರಣೆಗಳ ಒಂದು ಪಟ್ಟಿಯನ್ನೂ ಸಹ ಪಡೆಯಬಹುದು. ನಡುವೆ ಖಾಲಿ ಸ್ಥಳವಿರಬಾರದು ಮತ್ತು ಇದರ ನಂತರ ನೀವು ವಿವರಣೆ ಬಯಸುವ ಪದವನ್ನು ನಮೂದಿಸಿ. ಉದಾಹರಣೆಗಾಗಿ, [define:World Wide Web] ಎಂಬುದು ನಿಮಗೆ ವಿವಿಧ ಆನ್‌ಲೈನ್ ಸಂಪನ್ಮೂಲಗಳಿಂದ ಸಂಗ್ರಹಿಸಿದ "World Wide Web" ಪದದ ವ್ಯಾಖ್ಯಾನಗಳ ಪಟ್ಟಿಯನ್ನು ತೋರಿಸುತ್ತದೆ.


ಕಡತದ ವಿಧಗಳು

Google HTML ಅಲ್ಲದ ಕಡತದ ವಿಧಗಳ ಹುಡುಕಾಟವನ್ನು 12 ಕಡತದ ನಮೂನೆಗಳಿಗೆ ಹೆಚ್ಚಿಸಿದೆ. PDF ದಾಖಲಾತಿಗಳ ಜೊತೆಗೆ, Google ಈಗ ಮೈಕ್ರೊಸಾಫ್ಟ್ ಆಫೀಸ್, ಪೋಸ್ಟ್‌ಸ್ಕ್ರಿಪ್ಟ್, ಕೋರಲ್, ವರ್ಡ್‌ಪರ್ಫೆಕ್ಟ್, ಲೋಟಸ್ 1-2-3, ಮತ್ತು ಇತ್ಯಾದಿಗಳನ್ನೂ ಸಹ ಹುಡುಕುತ್ತದೆ. ಬಳಕೆದಾರರ ಪ್ರಶ್ನೆಗೆ ಸೂಕ್ತವಾದಾಗೆಲ್ಲಾ ಈ ಹೊಸ ಕಡತದ ನಮೂನೆಗಳು Google ಹುಡುಕಾಟ ಫಲಿತಾಂಶಗಳಲ್ಲಿ ಕಾಣಿಸುತ್ತವೆ. .

Google ಬಳಕೆದಾರರಿಗೆ "HTML ಆವೃತ್ತಿಯನ್ನು ವೀಕ್ಷಿಸಿ", ಎಂಬ ಅವಕಾಶವನ್ನೂ ಸಹ ಒದಗಿಸುವ ಮೂಲಕ, ಸಂಬಂಧಿತ ಅಪ್ಲಿಕೇಶನ್ ಇಲ್ಲದಿದ್ದರೂ ಸಹ, ಆ ಕಡತದಲ್ಲಿನ ಮಾಹಿತಿಯನ್ನು ನೋಡಲು ಬಳಕೆದಾರರಿಗೆ ಅನುಕೂಲಿಸುತ್ತದೆ. "HTML ಆವೃತ್ತಿಯನ್ನು ವೀಕ್ಷಿಸಿ" ಎಂಬ ಅವಕಾಶವು ಬಳಕೆದಾರರಿಗೆ ಕೆಲವೊಮ್ಮೆ ನಿರ್ಧಿಷ್ಠ ಕಡತದ ಮಾದರಿಗಳಲ್ಲಿ ಬರುವ ವೈರಸ್‌ಗಳನ್ನೂ ಸಹ ತಡೆಗಟ್ಟಲು ನೆರವಾಗುತ್ತದೆ.

ಒಟ್ಟಾರೆಯಾಗಿ, ಹೆಚ್ಚುವರಿ ಕಡತದ ನಮೂನೆಗಳು, ವರ್ಲ್ಡ್ ವೈಡ್ ವೆಬ್‌ನಲ್ಲಿ ಲಭ್ಯವಿರುವ ವಿಷಯವನ್ನು ನೋಡಲು Google ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ಕಾಲಕ್ರಮೇಣವಾಗಿ ಲಭ್ಯವಿರುವ ಕಡತದ ವಿಧಗಳ ಶ್ರೇಣಿಯನ್ನು ವಿಸ್ತರಿಸುವ ಯೋಜನೆಯನ್ನು Google ಹೊಂದಿದೆ.

ಈ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕಡತ ವಿಧಗಳ FAQ ಓದಿರಿ.

» [PDF] « ಹುಡುಕಾಟ ಇಂಜಿನ್‌ನ ರಚನೆ
ಕಡತದ ಮಾದರಿ: ಪಿಡಿಎಫ್/ಅಡೋಬ್ ಆಕ್ರೊಬ್ಯಾಟ್ - » HTML ಆವೃತ್ತಿಯನ್ನು ವೀಕ್ಷಿಸಿ «
... ಎರಡನೆಯದಾಗಿ, Google ಈ ಕೆಳಗಿನ...
ಫೋನ್ ಸಂಖ್ಯೆಗಳು, ಉತ್ಪನ್ನ ಸಂಖ್ಯೆಗಳು(), ವಿಧ ಅಥವಾ ಮಾದರಿ (ಪಠ್ಯ, HTML , PDF ಚಿತ್ರಗಳು, ಧ್ವನಿಗಳಂತಹ ಕೆಲವು ದೃಶ್ಯ ಪ್ರದರ್ಶನಗಳ ವಿವರಗಳನ್ನು ಟ್ರಾಕ್ ಮಾಡುವಲ್ಲಿ Google ನೆರವಾಗುತ್ತದೆ....
www-db.stanford.edu/pub/papers/google.pdf - ಹೋಲುವ ಪುಟಗಳು

ಒಂದು ನಿಗದಿತ ಬಗೆಯ ಕಡತದ ಮಾದರಿಹೊಂದಿರುವ ಒಂದು ನಿರ್ದಿಷ್ಟ ಫಲಿತಾಂಶಗಳ ಗುಂಪನ್ನುನೋಡಲು ನೀವು ಬಯಸಿದಲ್ಲಿ, (ಉದಾಹರಣೆಗೆ, PDF ಲಿಂಕ್‍ಗಳು), ನೀವು filetype:[extension] (ಉದಾಹರಣೆಗೆ, filetype:pdf) ಎಂದು ನಿಮ್ಮ ಹುಡುಕಾಟದ ಪಠ್ಯದ ಜೊತೆಗೆ ನೀಡಿರಿ.

ಉದಾಹರಣೆಗೆ:  

ಪ್ರೊಡಕ್ಟ್ ಹುಡುಕಾಟ

ಪ್ರೊಡಕ್ಟ್ ಹುಡುಕಾಟ ನೀವು Google ಬಳಸಿ ಉತ್ಪನ್ನಗಳಿಗಾಗಿ ಹುಡುಕಿದಲ್ಲಿ, ನೀವು ನಿಮ್ಮ ಫಲಿತಾಂಶಗಳ ಮೇಲ್ಗಡೆಯಲ್ಲಿ ಸೂಕ್ತವಾದ ಉತ್ಪನ್ನ ಮಾಹಿತಿಯನ್ನು ಮತ್ತು ಲಿಂಕ್‍ಗಳನ್ನು ನೋಡಬಹುದು. Google‍ನ ಉತ್ಪನ್ನ ಹುಡುಕಾಟ ಸೇವೆಯಲ್ಲಿ, ಭಾಗವಹಿಸುವ ಮಾರಾಟಗಾರರ ಸೈಟ್‍ಗಳಿಗೆ ಈ ಪ್ರೊಡಕ್ಟ್ ಹುಡುಕಾಟ ಫಲಿತಾಂಶಗಳು ಲಿಂಕ್‍ಗಳನ್ನು ಹೊಂದಿರುತ್ತವೆ. ಮಾರಾಟಗಾರರಿಗೆ ಪ್ರೊಡಕ್ಟ್ ಹುಡುಕಾಟದಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಉಚಿತವಾಗಿರುವುದರಿಂದ, ಈ ಫಲಿತಾಂಶಗಳು ಜಾಹೀರಾತುಗಳಲ್ಲ.

ಉದಾಹರಣೆಗೆ:  

ಗ್ರೂಪ್ಸ್

ಗ್ರೂಪ್ಸ್ ನೀವು Google‍ನಲ್ಲಿ ಹುಡುಕಿದಾಗ, ಕೆಲವೊಮ್ಮೆ ನಿಮ್ಮ ಫಲಿತಾಂಶಗಳ ಪುಟದ ಕೆಳಗಡೆಯಲ್ಲಿ ನೀವು Google ಗ್ರೂಪ್ಸ್‍ನಿಂದ ಫಲಿತಾಂಶಗಳನ್ನು ಕಾಣುತ್ತೀರಿ. ಈ ಸಂದೇಶಗಳು ನಿಮ್ಮ ಹುಡುಕಾಟಕ್ಕೆ ಸಂಬಂಧಿಸಿದ ಒಂದು ಶೀರ್ಷಿಕೆಯ ಬಗೆಗಿನ ಚರ್ಚಾ ಗುಂಪಿನಲ್ಲಿ ಬಳಕೆದಾರರು ಪೋಸ್ಟ್‍ಮಾಡಿರುವಂತದ್ದಾಗಿದೆ. ಈ ಫಲಿತಾಂಶಗಳಲ್ಲೊಂದನ್ನು ಕ್ಲಿಕ್ ಮಾಡಿದರೆ ಅದು ನಿಮ್ಮನ್ನು Google ಗ್ರೂಪ್ಸ್ ಸೈಟ್‍ನಲ್ಲಿರುವ ಆ ಸಂದೇಶದ ಪೂರ್ಣ ಪಠ್ಯಕ್ಕೆ ಕೊಂಡೊಯ್ಯುತ್ತದೆ.

ಉದಾಹರಣೆಗೆ:  

ನಾನು ಅದೃಷ್ಟಶಾಲಿ

"ನಾನು ಅದೃಷ್ಟಶಾಲಿ ™" ಎಂಬ ಗುಂಡಿಯು ನಿಮ್ಮನ್ನು ನೇರವಾಗಿ ನಿಮ್ಮ ಪ್ರಶ್ನೆಗೆ ಒದಗಿಸಲಾದ ಪ್ರಥಮ ವೆಬ್‍ಪುಟಕ್ಕೆ ಕೊಂಡೊಯ್ಯುತ್ತದೆ. ನೀವು ಇತರ ಹುಡುಕಾಟ ಫಲಿತಾಂಶಗಳನ್ನು ನೋಡುವುದೇ ಇಲ್ಲ. "ನಾನು ಅದೃಷ್ಟಶಾಲಿ" ಎಂಬ ಹುಡುಕಾಟ ಎಂದರೆ ನೀವು ಕಡಿಮೆ ಸಮಯವನ್ನು ಹುಡುಕಾಟದಲ್ಲಿ ಕಳೆಯುತ್ತಾ ಹೆಚ್ಚಿನ ಸಮಯವನ್ನು ಓದುವುದರಲ್ಲಿ ಕಳೆಯುತ್ತೀರಿ.

ಉದಾಹರಣೆಗಾಗಿ, ಬೆಂಗಳೂರು ವಿಶ್ವವಿದ್ಯಾನಿಲಯದ ಹೋಮ್‍ಪೇಜ್ ಹುಡುಕಲು, ನೀವು ಹುಡುಕಾಟ ಕ್ಷೇತ್ರದಲ್ಲಿ ಕೇವಲ Bangalore University ಎಂದು ನಮೂದಿಸಿ ಮತ್ತು "ನಾನು ಅದೃಷ್ಟಶಾಲಿ" ಎಂಬ ಗುಂಡಿಯನ್ನು ಕ್ಲಿಕ್ ಮಾಡಿ. Google ನಿಮ್ಮನ್ನು ನೇರವಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಅಧಿಕೃತ ಹೋಮ್‍ಪೇಜ್ ಆದ "www.bub.ernet.in" ಗೆ ನಿಮ್ಮನ್ನು ಕೊಂಡೊಯ್ಯುತ್ತದೆ.

ಉದಾಹರಣೆಗೆ:  
ನೀವು ಅದೃಷ್ಟಶಾಲಿ ಎಂದು ನಿಮಗನ್ನಿಸುತ್ತಿದೆಯೇ?


ಚಿತ್ರಗಳು

ನಿಮ್ಮ Google ಹುಡುಕಾಟದ ಫಲಿತಾಂಶಗಳ ಮೇಲ್ಭಾಗದಲ್ಲಿ ನೀವು ಕೆಲವೊಮ್ಮೆ ಚಿತ್ರಗಳನ್ನು ಕಾಣಬಹುದು. ಈ ಚಿತ್ರಗಳು ನಿಮ್ಮ ಹುಡುಕಾಟದ ಪಠ್ಯಕ್ಕೆ ಸೂಕ್ತವಾಗಿದೆ ಎಂದು ನಾವು ತಿಳಿದಿರುವಂತಹ ಚಿತ್ರಗಳಾಗಿವೆ.

ನೀವು Google ಚಿತ್ರ ಹುಡುಕಾಟದ ಮೂಲಕವಾಗಿ ಅಥವಾ ನಿಮ್ಮ ಸಾಮಾನ್ಯ ವೆಬ್ ಹುಡುಕಾಟ ಮಾಡುವಾಗ 'pics' ಅಥವಾ 'pictures' ಎಂಬ ಪಠ್ಯಗಳನ್ನು ಸೇರಿಸುವುದರೊಂದಿಗೆ, ಸೂಕ್ತ ಚಿತ್ರಗಳನ್ನೂ ಸಹ ನೀವು ಕಂಡುಕೊಳ್ಳಬಹುದು,

ಉದಾಹರಣೆಗೆ:  

ಸ್ಥಳೀಯ ಹುಡುಕಾಟ

ಸ್ಥಳೀಯ ಹುಡುಕಾಟ ಇಡೀ ವೆಬ್‍ನಲ್ಲಿ, ಒಂದು ನಿರ್ಧಿಷ್ಠ ನೆರೆಹೊರೆಯಲ್ಲಿರುವ ಮಳಿಗೆ ಮತ್ತು ವ್ಯಾಪಾರಗಳಲ್ಲಿ ಮಾತ್ರ ಹುಡುಕುವ ಸಾಮರ್ಥ್ಯವನ್ನು Google ನಿಮಗೆ ಒದಗಿಸುತ್ತದೆ. ನಿಮ್ಮ ಹುಡುಕಾಟದಲ್ಲಿ ಒಂದು ನಗರ ಅಥವಾ ಪಿನ್‍ಕೋಡ್ ಸೇರಿಸಿದರೆ, Google ನಿಮ್ಮ ಫಲಿತಾಂಶಗಳ ಮೇಲ್ಗಡೆಯಲ್ಲಿ ಆ ಸ್ಥಳದ ನಕ್ಷೆಯೊಂದಿಗೆ ಪರಿಶೀಲನೆ, ಮಾರ್ಗದರ್ಶನ ಮತ್ತು ಇನ್ನಷ್ಟು ಸೂಕ್ತವಾದ ಮಾಹಿತಿ ಹೊಂದಿರುವ ಫಲಿತಾಂಶಗಳನ್ನು ಪ್ರದರ್ಶಿಸುತ್ತದೆ.

ಉದಾಹರಣೆಗೆ:  

ಚಲನಚಿತ್ರಗಳು

ಚಲನಚಿತ್ರಗಳು ನಿಮ್ಮ ನೆರೆಹೊರೆಯಲ್ಲಿ ಪ್ರದರ್ಶಿಸಲಾಗುತ್ತಿರುವ ಚಲನಚಿತ್ರಗಳ ಪರಿಶೀಲನೆ ಮತ್ತು ಪ್ರದರ್ಶನ ಸಮಯಗಳನ್ನು ಹುಡುಕಲು, Google ಹುಡುಕಾಟ ಚೌಕದಲ್ಲಿ "movies', "show times" ಎಂದು ಅಥವಾ ಒಂದು ಪ್ರಸ್ತುತ ಚಲನಚಿತ್ರದ ಹೆಸರನ್ನು ನಮೂದಿಸಿ. Google ಲೋಕಲ್ ಬಳಸುವ ಮೂಲಕವಾಗಿ ನೀವು ಈಗಾಗಲೇ ನಿಮ್ಮ ಸ್ಥಳವನ್ನು ಉಳಿಸಿಕೊಂಡಿದ್ದಲ್ಲಿ, ನೀವು ಆಯ್ಕೆಮಾಡಿರುವ ಚಲನಚಿತ್ರಕ್ಕೆ ಹತ್ತಿರದ ಚಿತ್ರಮಂದಿರಗಳಲ್ಲಿನ ಪ್ರದರ್ಶನ ಸಮಯಗಳನ್ನು ಪ್ರಥಮ ಫಲಿತಾಂಶದಲ್ಲಿ ಪ್ರದರ್ಶಿಸುತ್ತದೆ..

ಉದಾಹರಣೆಗೆ:  

ಒಂದು ಪ್ರಸ್ತುತ ಪ್ರದರ್ಶಿಸಲ್ಪಡುತ್ತಿರುವ ಚಲನಚಿತ್ರದ ಚಿತ್ರಮಂದಿರಗಳು ಮತ್ತು ಪ್ರದರ್ಶನ ಸಮಯಗಳನ್ನು ಹುಡುಕಲು, ಕೇವಲ ಚಲನಚಿತ್ರದ ಹೆಸರಿಗಾಗಿ ಹುಡುಕಿ.

ಉದಾಹರಣೆಗೆ:  

ಒಂದು ಚಲನಚಿತ್ರದ ಶೀರ್ಷಿಕೆ ನೆನಪಿಗೆ ಬರುತ್ತಿಲ್ಲವೇ, ಅಥವಾ ಯಾವುದಾದರೂ ಒಂದು ಹೊಸದನ್ನು ನೋಡಲು ಬಯಸುತ್ತಿದ್ದೀರಾ? ನೀವು "movie:" ಎಂಬ ಆಪರೇಟರನ್ನು ಬಳಸಿ ನಿರ್ಧಿಷ್ಠ ನಟ, ನಿರ್ದೇಶಕ ಅಥವಾ ಚಿತ್ರದ ಕಥೆಗೆ ಸಂಬಂಧಿಸಿದ ಚಲನಚಿತ್ರಗಳನ್ನು ಹುಡುಕಬಹುದು.

ಉದಾಹರಣೆಗೆ:  

ನೀವು ಹುಡುಕಿದ ಚಲನಚಿತ್ರಗಳ ಬಗ್ಗೆ ಓದಲು ಬಯಸುತ್ತೀರಾ? ಯಾವುದೇ ಚಲನಚಿತ್ರದ ನಿಮ್ಮ ಹುಡುಕಾಟ ಫಲಿತಾಂಶಗಳಲ್ಲಿ 5 ಸ್ಟಾರ್‍ಗಳವರೆಗಿನ ಸರಾಸರಿ ರೇಟಿಂಗ್, ಆನ್‍ಲೈನ್ ವಿಮರ್ಶೆಗಳ ಅನೇಕ ತುಣುಕುಗಳನ್ನು, ಮತ್ತು ಅವುಗಳಿಗೆ ಲಿಂಕ್ ಗಳನ್ನು ಒಳಗೊಂಡಿರುತ್ತದೆ. ಆಯಾ ಚಲನಚಿತ್ರದ ಆನ್‍ಲೈನ್ ವಿಮರ್ಶೆಗಳ ಸಂಪೂರ್ಣ ಪಟ್ಟಿಗಾಗಿ, ಯಾವುದೇ ಶೀರ್ಷಿಕೆಯ ಹತ್ತಿರದಲ್ಲಿರುವ "reviews" ಲಿಂಕ್‍ಮೇಲೆ ಕ್ಲಿಕ್ ಮಾಡಿ.

ಸಂಗೀತ ಹುಡುಕಾಟ

ನೀವು ಹುಡುಕುತ್ತಿರುವ ಸಂಗೀತವನ್ನು ಖರೀದಿಸಲು ಸಂಬಂಧಿಸಿದ ಕಲಾವಿದರು, ಗೀತೆಗಳು, ಆಲ್ಬಂ‍ಗಳು ಮತ್ತು ಸ್ಥಳಗಳ ಬಗ್ಗೆ ಮಾಹಿತಿ ಪಡೆಯಿರಿ. ನೀವು ಯು.ಎಸ್.ನಲ್ಲಿ ಪ್ರಸಿದ್ಧವಾಗಿರುವ ಒಬ್ಬ ಕಲಾವಿನ ಹೆಸರನ್ನು ಹುಡುಕಾಟ ಚೌಕದಲ್ಲಿ ನಮೂದಿಸಿದಲ್ಲಿ, ನಾವು ನಿಮ್ಮ ಫಲಿತಾಂಶಗಳ ಮೇಲ್ಗಡೆಯಲ್ಲಿ ಆ ಕಲಾವಿದನಿಗೆ ಸಂಬಂಧಿಸಿದ ವಿಮರ್ಶೆಗಳು, ಗೀತೆ ಶೀರ್ಷಿಕೆಗಳು, ಸಂಗೀತವನ್ನು ಖರೀದಿಸಲು ಮಳಿಗೆಗಳು ಮತ್ತು ಇತರ ಉಪಯುಕ್ತ ಮಾಹಿತಿಯನ್ನು ಪ್ರದರ್ಶಿಸುತ್ತೇವೆ.

ಉದಾಹರಣೆಗೆ:  

  Pixies
Albums: Doolittle, Surfer Rosa, Pixies, and more...
Songs: Debaser, Wave of Mutilation, Silver, and more...
ಈ ಬಗ್ಗೆ ಹೆಚ್ಚಿನ ಮಾಹಿತಿ Pixies  

ಕಲಾವಿದನಿಗೆ ಸಂಬಂಧಿಸಿದ ಆಲ್ಬಂ‍ಗಳು, ಗೀತೆಗಳು ಮತ್ತು ಇನ್ನಷ್ಟು ಸಂಗೀತ ಮಾಹಿತಿಯನ್ನು ಪಡೆಯಲು ಲಿಂಕ್ ಮೇಲೆ ಕ್ಲಿಕ್ ಮಾಡಿರಿ.

ಸುದ್ದಿ ಶೀರ್ಷಿಕೆಗಳು

ವ್ಯಾಪಾರೀ ಪಟ್ಟಿಗಳು Google‍ನಲ್ಲಿ ಹುಡುಕುವಾಗ ನೀವು ನಿಮ್ಮ ಫಲಿತಾಂಶಗಳ ಮೇಲ್ಭಾಗದಲ್ಲಿ "News" ಎಂದು ಗುರುತಿಸಲಾದ ಲಿಂಕ್‍ಗಳನ್ನು ಕಾಣಬಹುದು. Google ಸತತವಾಗಿ ಹೊಸ ಸುದ್ದಿಗಳಿಗಾಗಿ ಗಮನಿಸುತ್ತಿದ್ದು ಅನೇಕ ಸುದ್ದಿ ಸೇವೆಗಳಿಂದ ಪಡೆಯಲಾದ ಆ ವರದಿಗಳಿಗೆ ಈ ಲಿಂಕ್‍ಗಳ ಮೂಲಕ ನಿಮ್ಮನ್ನು ಸಂಪರ್ಕಿಸುತ್ತದೆ. ನೀವು ನಮೂದಿಸಿದ ಪದಗಳು ಪ್ರಸ್ತುತ ಸುದ್ದಿಯಲ್ಲಿದ್ದರೆ ಈ ಲಿಂಕ್‍ಗಳು ಕಾಣಿಸುತ್ತವೆ ಮತ್ತು ಅವುಗಳ ಮೇಲೆ ಕ್ಲಿಕ್ ಮಾಡಿದಲ್ಲಿ. ಅದು ನಿಮ್ಮನ್ನು ನೇರವಾಗಿ ಅವುಗಳನ್ನು ಒದಗಿಸಿದ ಸುದ್ದಿ ಸೇವೆಗೆ ಕೊಂಡೊಯ್ಯುತ್ತದೆ.

ಉದಾಹರಣೆಗೆ:  

ಫೋನ್‍ಪುಸ್ತಕ

ಫೋನ್‍ಪುಸ್ತಕ ನಮ್ಮ ಹುಡುಕಾಟ ಚೌಕದ ಮೂಲಕವಾಗಿ ಒದಗಿಸುವ ಮಾಹಿತಿಯಲ್ಲಿ ಯು.ಎಸ್. ರಸ್ತೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯು ಮಾಹಿತಿಯನ್ನು ನೋಡುವ ಅನುಕೂಲತೆಯನ್ನು Google ಸೇರಿಸಿದೆ. ನಿರ್ದಿಷ್ಟ ಹುಡುಕಾಟ ಪದಗಳಿಗೆ ತಕ್ಕಂತೆ ಫಲಿತಾಂಶ ಪುಟಗಳ ಮೇಲ್ಭಾಗದಲ್ಲಿ ನೀವು ಸಾರ್ವಜನಿಕವಾಗಿ ಪಟ್ಟಿಮಾಡಲಾದ ದೂರವಾಣಿ ಸಂಖ್ಯೆಗಳು ಮತ್ತು ವಿಳಾಸಗಳನ್ನು ನೀವು ಕಾಣುತ್ತೀರಿ.

ಒಂದು ಯುಎಸ್ ನಿವಾಸದ ಪಟ್ಟಿಯನ್ನು ಹುಡುಕಲು, Google ಹುಡುಕಾಟ ಚೌಕದೊಳಗೆ ಈ ಮುಂದಿನ ಯಾವುದೇ ಸಂಯೋಜನೆಗಳನ್ನು ನಮೂದಿಸಿ:

  • ಮೊದಲ ಹೆಸರು (ಅಥವಾ ಮೊದಲಕ್ಷರ), ಕೊನೆಯ ಹೆಸರು, ನಗರ (ರಾಜ್ಯ ಐಚ್ಛಿಕವಾಗಿದೆ)
  • ಮೊದಲ ಹೆಸರು (ಅಥವಾ ಮೊದಲಕ್ಷರ), ಕೊನೆಯ ಹೆಸರು, ನಗರ, ರಾಜ್ಯ
  • ಮೊದಲ ಹೆಸರು (ಅಥವಾ ಮೊದಲಕ್ಷರ), ಕೊನೆಯ ಹೆಸರು, ಪ್ರಾದೇಶಿಕ ಕೋಡ್
  • ಮೊದಲ ಹೆಸರು (ಅಥವಾ ಮೊದಲಕ್ಷರ), ಕೊನೆಯ ಹೆಸರು, ಪಿನ್ ಕೋಡ್
  • ಪ್ರಾದೇಶಿಕ ಕೋಡ್ ಸಹ ಒಳಗೊಂಡಂತೆ, ದೂರವಾಣಿ ಸಂಖ್ಯೆ
  • ಕೊನೆಯ ಹೆಸರು, ನಗರ, ರಾಜ್ಯ
  • ಕೊನೆಯ ಹೆಸರು, ಪಿನ್ ಕೋಡ್

Google ಫೋನ್‍ಪುಸ್ತಕದಿಂದ ನಿಮ್ಮ ನಿವಾಸ ದೂರವಾಣಿ ಮತ್ತು ವಿಳಾಸ ಮಾಹಿತಿಯನ್ನು ತೆಗೆದುಹಾಕಲು,ಇಲ್ಲಿ ಕ್ಲಿಕ್ ಮಾಡಿ.


ಪ್ರ&ಉ

ಭಾರತದ ಜನಸಂಖ್ಯೆಯನ್ನು ತಿಳಿಯಲು ಬಯಸುವಿರಾ? ಅಲ್ಜೀರಿಯಾದ ಹಣದ ಹೆಸರೇನು? ಮಹಾತ್ಮಾ ಗಾಂಧಿಯ ಜನ್ಮಸ್ಥಳ? Google ಹುಡುಕಾಟ ಚೌಕದೊಳಗೆ ಒಂದು ಸತ್ಯಾಧಾರಿತ ಪ್ರಶ್ನೆ ಅಥವಾ (Like "population of India") ಪ್ರಶ್ನೆಯನ್ನು ನಮೂದಿಸುವ ಮೂಲಕ ನಮ್ಮನ್ನು ಕೇಳಿರಿ. ನಾವು ವೆಬ್ ಹುಡುಕಿ, ನಿಮ್ಮ ಹುಡುಕಾಟ ಫಲಿತಾಂಶ ಪುಟದ ಮೇಲ್ಭಾಗದಲ್ಲಿ ಉತ್ತರವನ್ನು ಪ್ರದರ್ಶಿಸುತ್ತೇವೆ. ನೀವು ಇನ್ನಷ್ಟು ಹೆಚ್ಚಾಗಿ ತಿಳಿದುಕೊಳ್ಳಲು ಸಹಾಯವಾಗುವಂತೆ ನಾವು ನಿಮ್ಮನ್ನು ಈ ಮಾಹಿತಿಯ ಮೂಲಕ್ಕೆ ಲಿಂಕ್ ಮಾಡುತ್ತೇವೆ.

ಉದಾಹರಣೆಗೆ:  

ನಿಮ್ಮ ಹುಡುಕಾಟವನ್ನು ನಿಖರಗೊಳಿಸಿ

ಕೆಲವು ನಿರ್ದಿಷ್ಟ ಶೀರ್ಷಿಕೆಗಳೊಳಗಿನ ನಿಮ್ಮ ಹುಡುಕಾಟವನ್ನು ಶೀಘ್ರವಾಗಿ ನಿಖರಗೊಳಿಸಲು ನೆರವಾಗುವ ಲಿಂಕ್‍ಗಳನ್ನು ಫಲಿತಾಂಶಗಳ ಪುಟದ ಮೇಲ್ಭಾಗದಲ್ಲಿ ಕಾಣುತ್ತೀರಿ.



ಈ ಲಿಂಕ್‍ಗಳು ನಿರ್ದಿಷ್ಟ ವೆಬ್‍ಪುಟಗಳಿಗೆ ನೇಮಿಸಲ್ಪಟ್ಟಿರುವ ಲೇಬಲ್‍ಗಳಾಗಿವೆ. ಸಂಸ್ಥೆಗಳು, ವ್ಯಾಪಾರಗಳು ಮತ್ತು ವ್ಯಕ್ತಿಗಳು ತಾವು ಉತ್ತಮವಾಗಿ ತಿಳಿದಿರುವ ಶೀರ್ಷಿಕೆಗಳಲ್ಲಿ ವೆಬ್‍ಸೈಟ್‍ಗಳನ್ನು ಲೇಬಲ್ ಮಾಡಬಹುದಾಗಿದೆ. ನೀವು Google ಕೊ-ಆಪ್ ಡೈರೆಕ್ಟರಿಗೆ ಭೇಟಿ ನೀಡುವ ಮೂಲಕ ಇಂತಹ ಹೆಚ್ಚಿನ ಪೂರೈಕೆದಾರರಲ್ಲಿ ನೀವು ಚಂದಾದಾರರಾಗಬಹುದು.

ಉದಾಹರಣೆಗೆ:  
ಉದಾಹರಣೆಗೆ:  

Google ಕೊ-ಆಪ್ ಡೈರೆಕ್ಟರಿಯು ನಿಮ್ಮ ಹುಡುಕಾಟ ಫಲಿತಾಂಶಗಳಲ್ಲಿ ರೆಸ್ಟೊರೆಂಟ್ ಕಾಯ್ದಿರಿಸುವಿಕೆಗಳು, ಆರ್ಥಿಕ ಮಾಹಿತಿ ಅಥವಾ ತಾರೆಗಳ ಬಗೆಗಿನ ಗಾಳಿಸುದ್ದಿಗಳು ಇಂತಹ ತಕ್ಷಣದ ಮಾಹಿತಿಯನ್ನು ಒದಗಿಸುವ ಚಂದಾದಾರರ ಲಿಂಕ್‍ಗಳನ್ನು ಸಹ ಒಳಗೊಂಡಿರುತ್ತದೆ -. ನಿಮ್ಮ ಆಯ್ಕೆಯ ಪೂರೈಕೆದಾರರಲ್ಲಿ ಚಂದಾದಾರರಾಗುವ ಮೂಲಕ ಈ ಸೇವೆಗಳನ್ನು ನಿಮ್ಮ Google ಹುಡುಕಾಟಕ್ಕೆ ಸೇರಿಸಿ.


ಫಲಿತಾಂಶಗಳನ್ನು ಪ್ರಿಫೆಚ್ ಮಾಡುವುದು

ಕೆಲವು ಹುಡುಕಾಟಗಳಲ್ಲಿ, ನೀವು ಕ್ಲಿಕ್ ಮಾಡುವ ಮೊದಲೇ, Google ಸ್ವಯಂಚಾಲಿತವಾಗಿ ಪ್ರಥಮ ಫಲಿತಾಂಶವನ್ನು ಡೌನ್‍ಲೋಡ್ ಮಾಡುವಂತೆ ನಿಮ್ಮ ಬ್ರೌಸರ್‍ಗೆ ಸೂಚಿಸುತ್ತದೆ. ನೀವು ಪ್ರಥಮ ಫಲಿತಾಂಶದ ಮೇಲೆ ಕ್ಲಿಕ್ ಮಾಡಿದರೆ, ಆ ಪುಟವು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಲೋಡ್ ಆಗುತ್ತದೆ.

Google ಫೈರ್‍ಫಾಕ್ಸ್‍ ಮತ್ತು ಮೊಸಿಲ್ಲಾ ವೆಬ್ ಬ್ರೌಸರ್‍ಗಳಲ್ಲಿ ಈ ಕಾರ್ಯಾಚರಣೆಯನ್ನು ಒದಗಿಸಲು ಎಂಬ Google ವಿಶೇಷ ಪ್ರಿಫೆಚಿಂಗ್ ವೈಶಿಷ್ಟ್ಯ ವನ್ನು ಉಪಯೋಗಿಸುತ್ತದೆ. ಹೀಗಾಗಿ ಫಲಿತಾಂಶಗಳ ಪ್ರಿಫೆಚಿಂಗ್ ಇಂಟರ್ನೆಟ್ ಎಕ್ಸ್‍ಪ್ಲೋರರ್ ಅಥವಾ ಇತರ ವೆಬ್ ಬ್ರೌಸರ್‍ಗಳಲ್ಲಿ ಲಭ್ಯವಿರುವುದಿಲ್ಲ. ನೀವು ಮೊಸಿಲ್ಲಾ ಪ್ರಿಫೆಚಿಂಗ್ FAQ ಗಳಲ್ಲಿ ವಿವರಿಸಲಾಗಿರುವಂತೆ, ನಿಮ್ಮ ವೆಬ್ ಬ್ರೌಸರ್‍ಆದ್ಯತೆಗಳಲ್ಲಿ ಪ್ರಿಫೆಚಿಂಗನ್ನು ನಿಷ್ಕ್ರಿಯಗೊಳಿಸಬಹುದು. ಫೈರ್‍ಫಾಕ್ಸ್‍ನಲ್ಲಿ ಈ ಮುಂದಿನಂತೆ ಮಾಡುವ ಮೂಲಕ ನೀವು ಪ್ರಿಫೆಚಿಂಗನ್ನು ನಿಷ್ಕ್ರಿಯಗೊಳಿಸಬಹುದು:

  1. ವಿಳಾಸ ಬಾರ್‍ನಲ್ಲಿ "about:config" ನಮೂದಿಸಿರಿ.
  2. "network.prefetch-next" ಸೆಟ್ಟಿಂಗ್‍ಗೆ ಸ್ಕ್ರಾಲ್ ಮಾಡಿರಿ ಮತ್ತು ಅಲ್ಲಿರುವ ಮೌಲ್ಯವನ್ನು "False" ಗೆ ನಿಗದಿಪಡಿಸಿರಿ.

ಪ್ರಿಫೆಚಿಂಗ್ ಸಕ್ರಿಯವಾಗಿರಿಸುವುದರೊಂದಿಗೆ, ನೀವು Google ಹುಡುಕಾಟ ಫಲಿತಾಂಶಗಳ ಪುಟಗಳನ್ನು ವೀಕ್ಷಿಸುವಾಗ ಪ್ರೀಫೆಚಿಂಗ್ ಸ್ವಯಂಚಾಲಿತವಾಗಿ ಆಗುವುದರಿಂದ, ನಿಮ್ಮ ಬ್ರೌಸರ್‍ನ ಸಂಗ್ರಹದಲ್ಲಿ ನೀವು ಕ್ಲಿಕ್ ಮಾಡದ ವೆಬ್ ಸೈಟ್‍ಗಳ ಕೂಕಿಗಳು ಮತ್ತು ವೆಬ್ ಪುಟಗಳು ಸಂಗ್ರಹಗೊಳ್ಳಬಹುದು. ನಿಮ್ಮ ಬ್ರೌಸರ್‍ನ ಸಂಗ್ರಹ ಮತ್ತು ಕೂಕಿಗಳನ್ನು ಖಾಲಿ ಮಾಡುವ ಮೂಲಕವಾಗಿ ನೀವು ಈ ಕಡತಗಳನ್ನು ಅಳಿಸಬಹುದು.

ನೀವು ಒಂದು ವೆಬ್ ಸರ್ವರ್ ಬಳಸುತ್ತಿದ್ದಲ್ಲಿ, ನೀವು ಈ ವೈಶಿಷ್ತ್ಯದ ಬಗ್ಗೆ ವೆಬ್‍ಮಾಸ್ಟರ್-ನಿರ್ದಿಷ್ಟ ಮಾಹಿತಿಯನ್ನು ನಮ್ಮವೆಬ್‍ಮಾಸ್ಟರ್ FAQ ಗಳಲ್ಲಿ ಕಾಣಬಹುದು.

ಸಂಖ್ಯೆಯ ಆಧಾರದಲ್ಲಿ ಹುಡುಕಿ

ಪಾರ್ಸಲ್ ಟ್ರಾಕ್ ಮಾಡುವ ಐಡಿಗಳು, ಪೇಟೆಂಟ್‍ಗಳು ಮತ್ತು ಇತರ ವಿಶೇಷ ಸಂಖ್ಯೆಗಳನ್ನು Google ಹುಡುಕಾಟ ಚೌಕದಲ್ಲಿ ನಮೂದಿಸುವ ಮೂಲಕ, ಅವುಗಳ ಬಗ್ಗೆ ಮಾಹಿತಿಗೆ ಶೀಘ್ರ ಪ್ರವೇಶವನ್ನು ಪಡೆಯಬಹುದು. ಉದಾಹರಣೆಗಾಗಿ, FedEx ಟ್ರಾಕಿಂಗ್ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಪ್ಯಾಕೇಜಿನ ನವೀನ ಮಾಹಿತಿಯನ್ನು ಪಡೆಯಬಹುದು. ಇತರ ಸಂಖ್ಯಾಧಾರಿತ ವಿಧಗಳ ಹುಡುಕಾಟಗಳಲ್ಲಿ ಇವು ಒಳಗೊಂಡಿವೆ:

UPS ಟ್ರಾಕಿಂಗ್ ಸಂಖ್ಯೆಗಳು ಹುಡುಕಾಟ ಉದಾಹರಣೆ: "1Z9999W99999999999"
FedEx ಟ್ರಾಕಿಂಗ್ ಸಂಖ್ಯೆಗಳು

ಹುಡುಕಾಟ ಉದಾಹರಣೆ: "999999999999"

USPS ಟ್ರಾಕಿಂಗ್ ಸಂಖ್ಯೆಗಳು ಹುಡುಕಾಟ ಉದಾಹರಣೆ: "9999 9999 9999 9999 9999 99"
ವಾಹನ ಐಡಿ (VIN) ಸಂಖ್ಯೆಗಳು ಹುಡುಕಾಟ ಉದಾಹರಣೆ : "AAAAA999A9AA99999"
UPC ಕೋಡ್‍ಗಳು ಹುಡುಕಾಟ ಉದಾಹರಣೆ : "073333531084"
ದೂರವಾಣಿ ಪ್ರದೇಶ ಕೋಡ್‍ಗಳು ಹುಡುಕಾಟ ಉದಾಹರಣೆ : "650"
ಪೇಟೆಂಟ್ ಸಂಖ್ಯೆಗಳು ಹುಡುಕಾಟ ಉದಾಹರಣೆ : "Patent 5123123"
ನಿಮ್ಮ ಪೇಟೆಂಟ್ ಸಂಖ್ಯೆಯ ಮೊದಲು "patent" ನಮೂದಿಸಲು ನೆನಪಿಡಿ.
ಉದಾಹರಣೆಗೆ:  
Google ಹುಡುಕಬಹುದಾದ ಇತರ ವಿಧಗಳ ಸಂಖ್ಯೆಯು ನಿಮ್ಮಲ್ಲಿವೆಯೇ? ದಯವಿಟ್ಟು ನಮ್ಮನ್ನು ಸಂಪರ್ಕಿಸಿ.


ಹೋಲುವ ಪುಟಗಳು

ನೀವು ಒಂದು ಹುಡುಕಾಟ ಫಲಿತಾಂಶದ "ಹೋಲುವ ಪುಟಗಳ" ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಈ ಫಲಿತಾಂಶ ಸಂಬಂಧಿತ ಪುಟಗಳಿಗಾಗಿ Google ಸ್ವಯಂಚಾಲಿತವಾಗಿ ವೆಬ್‍ನಲ್ಲಿ ಹುಡುಕುತ್ತದೆ.

ಹೋಲುವ ಪುಟಗಳ ವೈಶಿಷ್ಟ್ಯವನ್ನು ಅನೇಕ ಉದ್ದೇಶಗಳಿಗಾಗಿ ಬಳಸಬಹುದು. ನೀವು ಒಂದು ಸೈಟ್‍ನ ವಿಷಯವನ್ನು ಇಷ್ಟಪಟ್ಟಲ್ಲಿ, ಮತ್ತು ಇಷ್ಟವಾಗಿದ್ದು, ಅದರಲ್ಲಿ ಇನ್ನಷ್ಟು ವಿಷಯ ಇದ್ದರೆ ಚೆನ್ನಾಗಿತ್ತು ಎಂದು ನೀವು ಬಯಸಿದಲ್ಲಿ, ಹೋಲುವ ಪುಟಗಳು ನಿಮಗೆ ತಿಳಿಯದಿರುವ ಇದೇ ವಿಷಯವನ್ನು ಹೊಂದಿರುವ ಸೆಟ್‍ಗಳನ್ನು ಸೈಟ್‍ಗಳನ್ನು ಹುಡುಕಬಲ್ಲದ್ದಾಗಿವೆ. ನೀವು ಉತ್ಪನ್ನ ಮಾಹಿತಿಗಾಗಿ ಹುಡುಕುತ್ತಿದ್ದಲ್ಲಿ, ನೀವು ನೇರವಾಗಿ ಹೋಲಿಕೆಗಳನ್ನು ಮಾಡುವ ಹಾಗೆ, ಹೋಲುವ ಪುಟಗಳು ಸ್ಪರ್ಧಾತ್ಮಕ ಮಾಹಿತಿಯನ್ನು ಹುಡುಕಬಲ್ಲದ್ದಾಗಿವೆ. ನೀವು ಒಂದು ನಿರ್ಧಿಷ್ಠವಾದ ಕ್ಷೇತ್ರವನ್ನು ಸಂಶೋಧಿಸಲು ಬಯಸಿದಲ್ಲಿ, ಸರಿಯಾದ ಪದಗಳನ್ನು ಆಯ್ಕೆಮಾಡುವ ಅವಶ್ಯಕತೆ ಇಲ್ಲದೆಯೇ, ಹೋಲುವ ಪುಟಗಳು ಶೀಘ್ರವಾಗಿ ಬೃಹತ್ ಸಂಖ್ಯೆಯ ಸಂಪನ್ಮೂಲಗಳನ್ನು ಹುಡುಕುವಲ್ಲಿ ನೆರವಾಗುತ್ತದೆ.

ಒಂದು ಪುಟವು ಹೆಚ್ಚು ವಿಶೇಷವಾದಷ್ಟು, Google ಕಡಿಮೆ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಉದಾಹರಣೆಗಾಗಿ, ಹೋಲುವ ಪುಟಗಳು, ನಿಮ್ಮ ವೈಯಕ್ತಿಕ ಹೋಮ್‍ಪೇಜ್‍ಗೆ ಸಂಬಂಧಿಸಿದ ಅಧಿಕೃತ ಮಾಹಿತಿಯು ಲಭ್ಯವಿಲ್ಲದಿದ್ದಲ್ಲಿ, ಸಂಬಂಧಿತ ಪುಟಗಳನ್ನು ಹುಡುಕಲು ಸಾಧ್ಯವಿರುವುದಿಲ್ಲ. ಹಾಗೆಯೇ, ಸಂಸ್ಥೆಗಳು ತಮ್ಮ ಪುಟಗಳಿಗೆ ಅನೇಕ URLಗಳನ್ನು ಹೊಂದಿದ್ದಲ್ಲಿ (company.com ಮತ್ತು www.company.com ಗಳಂತವು), ಹೋಲುವ ಪುಟಗಳು, ಒಂದು URL ನಲ್ಲಿ ಅಲ್ಪ ಮಾಹಿತಿಯನ್ನು ಹೊಂದಿರುತ್ತದೆ, ಆದರೆ ಬೇರೆಯವುಗಳಲ್ಲಿ ಬಹಳಷ್ಟನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಹೇಗೂ, ಬಹುತೇಕ ವೆಬ್ ಪುಟಗಳಲ್ಲಿ ಹೋಲುವ ಪುಟಗಳು ಉತ್ತಮವಾಗಿ ಕಾರ್ಯಮಾಡುತ್ತದೆ.

Google
... ನಮ್ಮಲ್ಲಿ ಜಾಹೀರಾತು ನೀಡಿ - ವ್ಯಾಪಾರಿ ಪರಿಹಾರಗಳು - ಸೇವೆಗಳು & ಸಾಧನಗಳು - ಉದ್ಯೋಗಗಳು,
ಪ್ರೆಸ್, & ಸಹಾಯ ©2004 Google - 4,285,199,774 ವೆಬ್‍ಪುಟಗಳನ್ನು ಹುಡುಕುತ್ತಿದ್ದೇವೆ.
www.google.com/ - 3k - ಮಾರ್ಚ್ 26, 2004 - ಸಂಗ್ರಹಿಸಿದ -
» ಹೋಲುವ ಪುಟಗಳು «



ಸೈಟ್ ಹುಡುಕಾಟ

"site" ಪದದೊಂದಿಗೆ ಸೇರಿಸಲಾಗುವ ಕೊಲನ್, ಒಂದು ನಿರ್ಧಿಷ್ಠ ಸೈಟ್‍ಗೆ ನಿಮ್ಮ ಹುಡುಕಾಟವನ್ನು ನಿರ್ಬಂಧಿಸಲು ಅನುಕೂಲಿಸುತ್ತದೆ. ಇದನ್ನು ಮಾಡಲು, Google ಹುಡುಕಾಟ ಚೌಕದಲ್ಲಿ site:sampledomain.com ಸಿಂಟಾಕ್ಸ್ ಉಪಯೋಗಿಸಿ. ಉದಾಹರಣೆಗಾಗಿ, ಸ್ಟ್ಯಾನ್‍ಫೋರ್ಡ್ ಸೈಟ್ ಬಗ್ಗೆ ನೋಂದಣಿ ಮಾಹಿತಿಯನ್ನು ಪಡೆಯಲು, ಹೀಗೆ ನಮೂದಿಸಿ:

ಉದಾಹರಣೆಗಾಗಿ:  

ಪದ ಪರೀಕ್ಷಕ

Google ಪದ ಪರೀಕ್ಷಕ ಸಾಫ್ಟ್‍ವೇರ್ ಸ್ವಯಂಚಾಲಿತವಾಗಿ ನಿಮ್ಮ ಪ್ರಶ್ನೆಯನ್ನು ಪರಿಶೀಲಿಸಿ, ನೀವು ಒಂದು ಪದದ ಬಹು ಸಾಮಾನ್ಯವಾದ ಆವೃತ್ತಿಯನ್ನು ಉಪಯೋಗಿಸುತ್ತೀದ್ದೀರಾ ಎಂಬುದನ್ನು ಪರೀಕ್ಷಿಸುತ್ತದೆ. ಒಂದು ಪರ್ಯಾಯ ಪದದ ಮೂಲಕವಾಗಿ, ನೀವು ಹೆಚ್ಚು ಸೂಕ್ತವಾದ ಹುಡುಕಾಟ ಫಲಿತಾಂಶಗಳನ್ನು ಪಡೆಯುವಿರಿ ಎಂದು ಅದು ಲೆಕ್ಕಹಾಕಿದಲ್ಲಿ, ಅದು ನಿಮ್ಮನ್ನು ಹೀಗೆ ಕೇಳುತ್ತದೆ " Did you mean: (ಬಹು ಸಾಮಾನ್ಯ ಪದ more common spelling more common spelling)?". ಸಲಹೆ ನೀಡಲಾದ ಪದದ ಮೇಲೆ ಕ್ಲಿಕ್ ಮಾಡಿದಲ್ಲಿ, ಆ ಪದಕ್ಕೆ ಒಂದು Google ಹುಡುಕಾಟವನ್ನು ಆರಂಭಿಸುತ್ತದೆ. Google‍ನ ಪದ ಪರೀಕ್ಷಕ ಅಂತರ್ಜಾಲದಲ್ಲಿ ಕಂಡುಬರುವ ಎಲ್ಲಾ ಪದಗಳ ಮೇಲೆ ಆಧಾರಿತವಾಗಿರುವುದರಿಂದ, ಅದು ಒಂದು ಪ್ರಮಾಣಿತ ಪದ ಪರೀಕ್ಷಕ ಕಾರ್ಯಕ್ರಮ ಅಥವಾ ಶಬ್ದಕೋಶದಲ್ಲಿ ಕಂಡುಬರದ ಬಹುತೇಕ ಸಾಮಾನ್ಯ ಪದಗಳ ನಾಮಪದಗಳಿಗೆ (ಹೆಸರುಗಳು ಮತ್ತು ಸ್ಥಳಗಳು) ಸಲಹೆಯನ್ನು ಒದಗಿಸಲು ಸಮರ್ಥವಾಗಿದೆ.


ಸ್ಟಾಕ್ ಮತ್ತು ಫಂಡ್ ಕೋಟ್‍ಗಳು

ಸ್ಟಾಕ್ ಮತ್ತು ಮ್ಯೂಚುವಲ್ ಫಂಡ್ ಕೋಟ್‍ಗಳನ್ನು ಪಡೆಯಲು Google ಉಪಯೋಗಿಸಲು, ಕೇವಲ ಚಿಹ್ನೆಯನ್ನು ಹುಡುಕಾಟ ಚೌಕದಲ್ಲಿ ನಮೂದಿಸಿ.

ಉದಾಹರಣೆಗಾಗಿ:  
Cisco

Google ಫೈನಾನ್ಸ್‍ನಿಂದ ಹೆಚ್ಚು ಸೂಕ್ತವಾದ ಮಾಹಿತಿಯನ್ನು ನೋಡಲು ಚಾರ್ಟ್ ಮೇಲೆ ಅಥವಾ Google ಫೈನಾನ್ಸ್ ಲಿಂಕ್‍ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ಒದಗಿಸಲಾದ ಲಿಂಕ್‍ಗಳ ಮೇಲೆ ಕ್ಲಿಕ್ ಮಾಡುವ ಮೂಲಕವಾಗಿ, ನೀವು ಇತರ ಆರ್ಥಿಕ ಮಾಹಿತಿ ಪೂರೈಕೆದಾರರಲ್ಲಿಗೆ ನೇರವಾಗಿ ಹೋಗಬಹುದಾಗಿದೆ. ಈ ಆರ್ಥಿಕ ಮಾಹಿತಿ ಪೂರೈಕೆದಾರರನ್ನು, ಸ್ವತಂತ್ರವಾದ ಮೂರನೇ ವ್ಯಕ್ತಿ ಸಭಿಕರ ಮಾಪನ ಸಂಸ್ಥೆಗಳು ನಿರ್ಧರಿಸುವ ಪ್ರಸಿದ್ಧಿಯ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ ಮತ್ತು ಕ್ರಮವಾಗಿರಿಸಲಾಗುತ್ತದೆ. ಇದರ ಜೊತೆಗೆ, ನಾವು ಡೌನ್‍ಲೋಡ್ ವೇಗ, ಬಳಕೆದಾರರ ಇಂಟರ್‍ಫೇಸ್ ಮತ್ತು ಕಾರ್ಯಾಚರಣೆಗಳಂತಹ ಪ್ರಮುಖ ಗುಣಮಟ್ಟದ ಅಂಶಗಳನ್ನು ಪರಿಗಣಿಸುತ್ತೇವೆ. ನಾವು ಒಳಪಡಿಸಬಹುದಾದ ಒಬ್ಬ ಪೂರೈಕೆದಾರರನ್ನು ನೀವು ಸೂಚಿಸಲು ಬಯಸಿದಲ್ಲಿ, ದಯವಿಟ್ಟುನಮ್ಮನ್ನು ಸಂಪರ್ಕಿಸಿ.


ರಸ್ತೆ ನಕ್ಷೆಗಳು

ನಕ್ಷೆ ಐಕಾನ್

ರಸ್ತೆ ನಕ್ಷೆಗಳನ್ನು ಹುಡುಕಲು Google ಉಪಯೋಗಿಸಲು, ಪಿನ್ ಕೋಡ್ ಅಥವಾ ನಗರ/ರಾಜ್ಯವನ್ನೂ ಒಳಗೊಂಡಂತೆ ಯು.ಎಸ್. ರಸ್ತೆ ವಿಳಾಸವನ್ನು (ಉದಾಹರಣೆಗಾಗಿ. 165 University Ave Palo Alto CA), Google ಹುಡುಕಾಟ ಚೌಕದಲ್ಲಿ ನಮೂದಿಸಿರಿ. ಸಾಮಾನ್ಯವಾಗಿ, ರಸ್ತೆ ವಿಳಾಸ ಮತ್ತು ನಗರದ ಹೆಸರು ಸಾಕಾಗುತ್ತದೆ.

ಉದಾಹರಣೆಗಾಗಿ:  

ನಿಮ್ಮ ಪ್ರಶ್ನೆಯನ್ನು Google ಒಂದು ನಕ್ಷೆಯ ಕೋರಿಕೆಯನ್ನಾಗಿ ಗುರುತಿಸಿದಾಗ, ನಿಮ್ಮ ವಿಳಾಸವನ್ನು ಒಂದು Google ನಕ್ಷೆಯ ಮೇಲೆ ನಾವು ತೋರಿಸುತ್ತೇವೆ ಮತ್ತು ಮಾರ್ಗಗಳನ್ನು ನೀವು ಪಡೆದುಕೊಳ್ಳುವಂತೆ ಮಾಡುತ್ತೇವೆ ಮತ್ತು ನಿಮ್ಮ ಮೂಲ ಸ್ಥಳವನ್ನು ಶೇಖರಿಸುತ್ತೇವೆ.


ಪ್ರಯಾಣ ಮಾಹಿತಿ

ಒಂದು ನಿರ್ಧಿಷ್ಠ ವಿಮಾನ ನಿಲ್ದಾಣದಲ್ಲಿನ ತಡವಾಗುವಿಕೆ ಮತ್ತು ಹವಾಮಾನ ಪರಿಸ್ಥಿತಿಗಳನ್ನು ನೋಡಲು, ವಿಮಾನ ನಿಲ್ದಾಣದ ಮೂರು ಅಕ್ಷರಗಳ ಕೋಡ್ ನಮೂದಿಸಿ ಆನಂತರ "delhi airport", ಪದವನ್ನು ಸೇರಿಸಿ. ಉದಾಹರಣೆಗಾಗಿ, "delhi airport." ಹುಡುಕುವ ಮೂಲಕವಾಗಿ ದೆಹಲಿ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಸುದ್ದಿಗಳನ್ನು ಪಡೆಯಬಹುದು.

ಉದಾಹರಣೆಗಾಗಿ:  
ದೆಹಲಿಯ. ವಿಮಾನದ ಸ್ಥಿತಿಯನ್ನು ಪರೀಕ್ಷಿಸಲು, ಏರ್‍ಲೈನ್ ಹೆಸರು ನಂತರ ವಿಮಾನದ ಸಂಖ್ಯೆಯನ್ನು ನಮೂದಿಸಿ. ಉದಾಹರಣೆಗಾಗಿ, ಇಂಡಿಯನ್ ಏರ್ ಲೈನ್ಸ್ ವಿಮಾನ 7542 ದ ಸ್ಥಿತಿಯನ್ನು ನೋಡಲು, "Indian Airlines 7542" ಎಂದು ಹುಡುಕಿ.

ಉದಾಹರಣೆಗಾಗಿ:  


ಹವಾಮಾನ

ಯು.ಎಸ್. ಅಥವಾ ವಿಶ್ವದಾದ್ಯಂತ ಯಾವುದೇ ಸ್ಥಳದ ಹವಾಮಾನ ಪರಿಸ್ಥಿತಿಗಳು ಮತ್ತು ನಾಲ್ಕು ದಿನದ ಮುನ್ಸೂಚನೆಯನ್ನು ನೋಡಲು, "weather" ಎಂದು ನಮೂದಿಸಿ ನಂತರ ಸ್ಥಳವನ್ನು ನಮೂದಿಸಿ. ಸಾಮಾನ್ಯವಾಗಿ ನಗರದ ಹೆಸರು ಸಾಕಾಗುತ್ತದೆ, ಆದರೆ ವಿಶ್ವದಾದ್ಯಂತವಿರುವ ನಗರಗಳಿಗಾಗಿ ನೀವು ಒಂದು ರಾಜ್ಯ ಅಥವಾ ಪಿನ್‍ಕೋಡ್ ಅಥವಾ ದೇಶವನ್ನು ಸಹ ನಮೂದಿಸಬಹುದು. ಉದಾಹರಣೆಗಾಗಿ, ಪಾಲೊ ಆಲ್ಟೊ ಹವಾಮಾನವನ್ನು ನೋಡಲು, ನೀವು "weather palo alto, ca" ಅಥವಾ "weather palo alto 94301" ಎಂದು ನಮೂದಿಸಬಹುದು.

ನಿಮ್ಮ ವೈಯಕ್ತಿಕರಿಸಿದ ಹೋಮ್‍ಪೇಜ್‍ನಲ್ಲಿ ಈ ಸ್ಥಳದ ಹವಾಮಾನವನ್ನು ನೋಡಲು ನೀವು ಬಯಸಿದಲ್ಲಿ, ಬಲಮೇಲ್ಭಾಗದ ಮೂಲೆಯಲ್ಲಿರುವ 'ನನ್ನ Google ಹೋಮ್‍ಪೇಜ್‍ಗೆ ಸೇರಿಸು' ಎಂಬ ಗುಂಡಿಯನ್ನು ಕ್ಲಿಕ್ ಮಾಡುವ ಮೂಲಕ ಪಡೆಯಬಹುದು.

ಉದಾಹರಣೆಗಾಗಿ:  

ಎಲ್ಲಾ ಹವಾಮಾನ ಪರಿಸ್ಥಿತಿಗಳು ಮತ್ತು ಮುನ್ಸೂಚನೆಗಳನ್ನು ಒದಗಿಸುವವರು Weather Underground, Inc.


ವೆಬ್ ಪುಟ ಭಾಷಾಂತರ

ಈ ಭಾಷಾಂತರ ವೈಶಿಷ್ಟ್ಯದೊಂದಿಗೆ Google ಭಾಷೆಯ ಅಡ್ಡಗೋಡೆಯನ್ನು ತೊಡೆದು ಹಾಕುತ್ತದೆ. ಯಾಂತ್ರಿಕ ಭಾಷಾಂತರವನ್ನು ಉಪಯೋಗಿಸುವ ಮೂಲಕ, Google ಈಗ ನಿಮ್ಮ ಭಾಷೆಯನ್ನು ಹೊರತುಪಡಿಸಿ ಇತರ ಭಾಷೆಯ ವೆಬ್ ಪುಟಗಳನ್ನೂ ಸಹ ಪ್ರವೇಶಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಪ್ರಸ್ತುತವಾಗಿ Google ಈ ಮುಂದಿನ ಭಾಷಾಂತರ ಜೊತೆಗಳನ್ನು ಒದಗಿಸುತ್ತಿದೆ: ಇಂಗ್ಲೀಷ್‍ನಿಂದ ಅರಾಬಿಕ್, ಚೀನೀಸ್, ಫ್ರೆಂಚ್, ಜರ್ಮನ್, ಇಟಾಲಿಯನ್, ಕೊರಿಯನ್, ಜಪಾನೀಸ್, ಸ್ಪಾನಿಶ್ ಮತ್ತು ಪೋರ್ಚುಗಲ್ ಮತ್ತು ಇವುಗಳಿಂದ ಇಂಗ್ಲಿಷ್ ಗೆ; ಮತ್ತು ಜರ್ಮನ್ ನಿಂದ ಫ್ರೆಂಚ್ ಮತ್ತು ಪ್ರತಿಕ್ರಮವಾಗಿ ಫ್ರೆಂಚ್ ನಿಂದ ಜರ್ಮನ್.

ನಿಮ್ಮ ಹುಡುಕಾಟ ಫಲಿತಾಂಶಗಳು ಇವುಗಳಲ್ಲೊಂದು ಭಾಷೆಯ ಪುಟವನ್ನು ಹೊಂದಿದ್ದಲ್ಲಿ, ಮತ್ತು ನಾವು ನಿಮ್ಮ ಭಾಷಾಂತರ ಜೊತೆಯನ್ನು ಬೆಂಬಲಿಸಿದಲ್ಲಿ, ನೀವು ಆ ಪುಟವನ್ನು ನಿಮ್ಮ ಭಾಷೆಗೆ ಒಂದೇ ಕ್ಲಿಕ್‍ನಲ್ಲಿ ಭಾಷಾಂತರಿಸಬಹುದು.

ಈ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭಾಷಾಂತರ FAQ ಗಳನ್ನು ಓದಿರಿ.

RépertoireWeb de Google - World > Français - » [ ಈ ಪುಟವನ್ನು ಭಾಷಾಂತರಿಸು ] «
... Modifié par Google - ©2003 Google Aide du répertoire
Google - À propos - Google ಆಂಗ್ಲ ಭಾಷೆಯಲ್ಲಿ.
directory.google.com/Top/World/ - 7k - ಮಾರ್ಚ್ 26, 2004 - ಸಂಗ್ರಹಿಸಿದ - ಹೋಲುವ ಪುಟಗಳು



ನಿಮಗೆ ಯಾರು ಲಿಂಕ್ ಹೊಂದಿದ್ದಾರೆ?

ಕೆಲವು ಪದಗಳ ನಂತರ ಕೊಲನ್ ಇದ್ದಲ್ಲಿ, ಅವುಗಳಿಗೆ Google‍ನಲ್ಲಿ ವಿಶೇಷ ಅರ್ಥವಿದೆ. Google‍ನಲ್ಲಿನ ಅಂತಹ ಒಂದು ಪದವೆಂದರೆ link: ಆಪರೇಟರ್. link:siteURL ಪ್ರಶ್ನೆಯು ಆ URLಗೆ ಸೂಚಿಸುವ ಪುಟಗಳನ್ನು ತೋರಿಸುತ್ತದೆ. ಉದಾಹರಣೆಗಾಗಿ, link:www.google.com Google ಹೋಮ್ ಪೇಜ್‍ಗೆ ಸೂಚಿಸುವ ಪುಟಗಳನ್ನು ನಿಮಗೆ ತೋರಿಸುತ್ತದೆ. ನೀವು ಒಂದು ಲಿಂಕ್ ಹುಡುಕಾಟವನ್ನು ಸಾಮಾನ್ಯ ಪದ ಹುಡುಕಾಟದೊದಿಗೆ ಕೂಡಿಸಲಾಗುವುದಿಲ್ಲ.

ಉದಾಹರಣೆಗಾಗಿ: