"Kannada" via Bala
via Yahoo! Kannada on 7/31/10
ಬೆಂಗಳೂರು: ಆಡಳಿತಾರೂಢ ಸರಕಾರವನ್ನು ನಡುಗಿಸುತ್ತಿದ್ದ ಬಳ್ಳಾರಿ ಗಣಿಧಣಿಗಳ ವಿರುದ್ಧ ಇದೀಗ ಬಿಜೆಪಿ ಮುಖಂಡರೇ ತಿರುಗಿ ಬಿದ್ದಿದ್ದಾರೆ. ಆ ನಿಟ್ಟಿನಲ್ಲಿ ಸರಕಾರ ಉಳಿಸಲು ಜೆಡಿಎಸ್ ಜೊತೆಗೆ ಕೈಜೋಡಿಸುವುದು ಸೇರಿದಂತೆ ಯಾವುದೇ ರೀತಿಯ ತಂತ್ರಕ್ಕೂ ಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಹೇಳುವ ಮೂಲಕ ಬಳ್ಳಾರಿ ಸಚಿವರಿಗೆ ಪರೋಕ್ಷವಾಗಿ ಸಡ್ಡು ಹೊಡೆದಿದ್ದಾರೆ.
via Yahoo! Kannada on 7/31/10
ಅಹಮದಾಬಾದ್: ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಹತ್ಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನನ್ನು ಹೆದರಿಸಲು ಯಾರಾದರೂ ಬಯಸುತ್ತಿದ್ದರೆ ಅವರಿಗೆ ನಾನು ಹೇಳ ಬಯಸುವುದು ಇಷ್ಟೇ, ಈ ಮೋದಿ ಸತ್ಯಕ್ಕೆ ತಲೆ ಬಾಗುತ್ತಾನೆ, ಆದರೆ ಸಾವಿರ ಸುಳ್ಳು ಎದುರಾದರೂ ಅದನ್ನು ಲೆಕ್ಕಿಸುವುದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎದೆ ತಟ್ಟಿಕೊಂಡಿದ್ದಾರೆ.
via Yahoo! Kannada on 7/31/10
ಮುಂಬೈ: ನೀವು ಸರಕಾರಿ ಉದ್ಯೋಗಿಯಾಗಿದ್ದರೆ, ಯಾವುದಾದರೂ ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ ಬೇಕಿದೆಯೇ? ಹಾಗಿದ್ದರೆ ಕಾಂಗ್ರೆಸ್‌ನ ಪುಡಾರಿಗಳನ್ನು ಮುಲಾಜಿಲ್ಲದೆ ಸಂಪರ್ಕಿಸಿ. ಖಂಡಿತಾ ನಿಮ್ಮ ಕೆಲಸ ನಡೆದೇ ನಡೆಯುತ್ತದೆ. ಇದಕ್ಕೆ ಸಿಕ್ಕಿರುವ ಉದಾಹರಣೆಯೊಂದು ಇಲ್ಲಿದೆ.
ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದುಕೊಂಡಿರುವ ವರದಿಯಿಂದ ಬಹಿರಂಗವಾಗಿರುವ ಅಂಶವಿದು. ಅದರ ಪ್ರಕಾರ ಇದೀಗ ವಿದೇಶಾಂಗ ಸಚಿವರಾಗಿರುವ ಎಸ್.ಎಂ. ಕೃಷ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಕಾಂಗ್ರೆಸ್ಸಿಗ ಅಜಿತ್ ಜೋಗಿ, ಛಗನ್ ಭುಜಬಲ್ ಮುಂತಾದವರ ಶಿಫಾರಸುಗಳನ್ನು ಪಡೆದುಕೊಂಡು ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ವಶೀಲಿಬಾಜಿ ನಡೆಸಲಾಗಿದೆ.
via Yahoo! Kannada on 7/31/10
ಸಹರಾಂಪುರ್: ಶುಲ್ಕ ಪಾವತಿಸದ ಬಾಲಕಿಗೆ ಶಾಲೆ ನೀಡಿದ ಶಿಕ್ಷೆಯಿಂದ ತೀವ್ರ ಅಪಮಾನಗೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯಿದು. ಸ್ವತಃ ಪ್ರಾಂಶುಪಾಲನ ಚಿತಾವಣೆಯಿಂದ ಮೂರನೇ ತರಗತಿಯ ಪುಟ್ಟ ಬಾಲಕಿ ಶವವಾಗಿ ಹೋಗಿದ್ದಾಳೆ.
ಉತ್ತರ ಪ್ರದೇಶದ ಸಹಾರಾಂಪುರ್ ಜಿಲ್ಲೆಯ ಬಾಲ್ಸುವಾ ಗ್ರಾಮದಲ್ಲಿ ನಡೆದ ಘಟನೆಯಿದು. ಇಲ್ಲಿನ ದಿನಗೂಲಿ ಕಾರ್ಮಿಕ ದಂಪತಿಯ 13ರ ಹರೆಯದ ಪುತ್ರಿ ಲಕ್ಷ್ಮಿ ಶಾಲೆಯ ಶುಲ್ಕ ಪಾವತಿ ಮಾಡಿರಲಿಲ್ಲ. ಅದಕ್ಕೆ ಕಾರಣವೂ ಇತ್ತು.
via Yahoo! Kannada on 7/31/10
ಬೆಂಗಳೂರು: ರೆಡ್ಡಿ ಬಣದೊಂದಿಗೆ ಗುರುತಿಸಿಕೊಂಡು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ ಪಟಾಲಂ ಇದೀಗ ರೆಡ್ಡಿ ಸಹೋದರರ ವಿರುದ್ಧ ತಿರುಗಿ ಬಿದ್ದಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡ್ಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೆಡ್ಡಿ ಸಹೋದರರ ವಿರುದ್ಧವೇ ಸಮರ ಸಾರುವ ಮೂಲಕ ಸಿಎಂಗೆ ಸ್ವಾಮಿನಿಷ್ಠೆ ತೋರಿದ್ದಾರೆ.
via Yahoo! Kannada on 7/31/10
ಕೊಲಂಬೊ: 37ರ ಹರೆಯದಲ್ಲೂ ಯುವ ಕ್ರಿಕೆಟಿಗರನ್ನು ಮೀರಿ ಆಟವಾಡುವ ಮೂಲಕ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಯಸ್ಸು ತನಗೆ ಕೇವಲ ಸಂಖ್ಯೆ ಮಾತ್ರವಾಗಿದೆ ಎಂದು ಹೇಳಿದ್ದಾರೆ.
ಎಂಟು ಗಂಟೆ ಕ್ರೀಸಿನಲ್ಲಿ ನೆಲೆಯೂರಿ ನಿಂತಿದ್ದ ಸಚಿನ್ ತನ್ನ ಕ್ರೀಡಾ ಬಾಳ್ವೆಯ ಐದನೇ ದ್ವಿಶತಕ ಬಾರಿಸಿದ್ದರು. ಅವರ 203 ರನ್ನುಗಳ ಅಮೂಲ್ಯ ಇನ್ನಿಂಗ್ಸ್‌ನಲ್ಲಿ 73 ಒಂಟಿ ರನ್, 23 ಬೌಂಡರಿ ಹಾಗೂ ಒಂದು ಮನಮೋಹಕ ಸಿಕ್ಸರ್ ಸೇರಿದ್ದವು.
via Yahoo! Kannada on 7/31/10
ಹೈದ್ರಾಬಾದ್: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿರುವುದು ಶ್ರೇಷ್ಠ ಗೌರವವಾಗಿದೆ ಎಂದು ವಿಶ್ವದ ಎರಡನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.
via Yahoo! Kannada on 7/31/10
ಬೆಂಗಳೂರು: ಕಾಂಗ್ರೆಸ್ ಮುಖಂಡರು ಬಳ್ಳಾರಿ ಪಾದಯಾತ್ರೆಯನ್ನು ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವುದಕ್ಕಿಂತ ಸಚಿವ ಶ್ರೀರಾಮುಲು ಕೇಶ ಮುಂಡನವೇ ಒಳ್ಳೆಯ ಕೆಲಸ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
via ಬಾನಾಡಿ by ಬಾನಾಡಿ on 7/30/10
A Government Department Spending Money on a Private Media Is itn't wasting tax payers money? (BND)