Google Maps ಅಂತಿಮ ಬಳಕೆದಾರರಿಗಾಗಿ ಹೆಚ್ಚುವರಿ ಸೇವಾ ನಿಯಮಗಳು
ಕೊನೆಯದಾಗಿ ಮಾರ್ಪಡಿಸಿದ ದಿನಾಂಕ: 4 ಜೂನ್ 2025
Google Maps ಅನ್ನು ಬಳಸುವ ಮೂಲಕ ಅಥವಾ Google Maps Platform ಸೇವೆಗಳನ್ನು ಇಂಟಿಗ್ರೇಟ್ ಮಾಡುವ ಯಾವುದೇ ಥರ್ಡ್-ಪಾರ್ಟಿ ಉತ್ಪನ್ನಗಳು ಅಥವಾ ಸೇವೆಗಳನ್ನು ಬಳಸುವ ಮೂಲಕ, ಅಂತಿಮ ಬಳಕೆದಾರರಾಗಿ, ನೀವು ಇವುಗಳಿಗೆ ಸಮ್ಮತಿಸಬೇಕು (1) Google ಸೇವಾ ನಿಯಮಗಳು ಮತ್ತು (2) ಈ Google Maps ಹೆಚ್ಚುವರಿ ಸೇವಾ ನಿಯಮಗಳು (“Maps ಹೆಚ್ಚುವರಿ ನಿಯಮಗಳು”). Maps ಹೆಚ್ಚುವರಿ ನಿಯಮಗಳು, Google Maps/Google Earth ಗಾಗಿ ಮತ್ತು Google Maps/Google Earth API ಗಳಿಗಾಗಿ ಕಾನೂನು ನೋಟಿಸ್‌ಗಳನ್ನು ರೆಫರೆನ್ಸ್ ಪ್ರಕಾರ ಇನ್‌ಕಾರ್ಪೊರೇಟ್ ಮಾಡುತ್ತವೆ.
ಈ ಪ್ರತಿಯೊಂದು ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ. ಒಟ್ಟಾರೆ, ಈ ಡಾಕ್ಯುಮೆಂಟ್‌ಗಳನ್ನು “ನಿಯಮಗಳು” ಎಂದು ಕರೆಯಲಾಗುತ್ತದೆ. ನೀವು ನಮ್ಮ ಸೇವೆಗಳನ್ನು ಬಳಸುವಾಗ ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು ಮತ್ತು ನಿಮ್ಮಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ ಎಂಬುದನ್ನು ಅವು ದೃಢಪಡಿಸುತ್ತವೆ.
ನಿಮ್ಮ ವ್ಯಾಪಾರದ ಪ್ರೊಫೈಲ್ ಅನ್ನು ನಿರ್ವಹಿಸಲು ನೀವು Google Maps ನಲ್ಲಿ ವ್ಯಾಪಾರಿ-ಮಾತ್ರ ಫೀಚರ್‌ಗಳನ್ನು ಬಳಸಿದರೆ, https://support.google.com/business/answer/9292476 ನಲ್ಲಿ ಇರುವ Google Business Profile ನಿಯಮಗಳು ಆ ಬಳಕೆಗೆ ಅನ್ವಯಿಸುತ್ತವೆ.
ನೀವು ನಮ್ಮ ಗೌಪ್ಯತೆ ನೀತಿಯನ್ನು ಓದುವಂತೆ ನಾವು ಪ್ರೋತ್ಸಾಹಿಸುತ್ತೇವೆ. ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೇವೆ, ಅದನ್ನು ನಾವು ಏಕೆ ಸಂಗ್ರಹಿಸುತ್ತೇವೆ ಮತ್ತು ನಿಮ್ಮ ಮಾಹಿತಿಯನ್ನು ನೀವು ಹೇಗೆ ಅಪ್‌ಡೇಟ್ ಮಾಡಬಹುದು, ನಿರ್ವಹಿಸಬಹುದು, ಎಕ್ಸ್‌ಪೋರ್ಟ್ ಮಾಡಬಹುದು ಮತ್ತು ಅಳಿಸಬಹುದು ಎನ್ನುವುದನ್ನು ಇದು ವಿವರಿಸುತ್ತದೆ.
ಪರವಾನಗಿ.ನೀವು ಈ ನಿಯಮಗಳನ್ನು ಅನುಸರಿಸುವವರೆಗೆ Google ಸೇವಾ ನಿಯಮಗಳು, ನೀವು Google Maps ಅನ್ನು ಬಳಸಲು ಪರವಾನಗಿ ನೀಡುತ್ತವೆ. ಈ ಕೆಳಗಿನವುಗಳನ್ನು ಮಾಡಲು ಅವಕಾಶ ನೀಡುವ ಫೀಚರ್‌ಗಳೂ ಸಹ ಇದರಲ್ಲಿ ಸೇರಿರುತ್ತವೆ:
ನಕ್ಷೆಗಳನ್ನು ವೀಕ್ಷಿಸುವುದು ಹಾಗೂ ಟಿಪ್ಪಣಿ ಸೇರಿಸುವುದು;
KML ಫೈಲ್‌ಗಳು ಹಾಗೂ ನಕ್ಷೆಯ ಲೇಯರ್‌ಗಳನ್ನು ರಚಿಸುವುದು; ಮತ್ತು
ವೀಡಿಯೊದಲ್ಲಿ ಮತ್ತು ಮುದ್ರಿತ ರೂಪದಲ್ಲಿ, ಸರಿಯಾದ ಆ್ಯಟ್ರಿಬ್ಯೂಶನ್‌ನೊಂದಿಗೆ ಕಂಟೆಂಟ್ ಅನ್ನು ಆನ್‌ಲೈನ್‌ನಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸುವುದು.
ನೀವು Google Maps ಮೂಲಕ ಮಾಡಲು ಅನುಮತಿಯಿರುವ ನಿರ್ದಿಷ್ಟ ಸಂಗತಿಗಳ ಕುರಿತು ವಿವರಗಳಿಗಾಗಿ, Google Maps, Google Earth ಮತ್ತು Street View ಬಳಕೆಯ ಅನುಮತಿಗಳ ಪುಟವನ್ನು ನೋಡಿ.
ನಿಷೇಧಿತ ನಡವಳಿಕೆ. Google Maps ಬಳಸಲು, ಈ ವಿಭಾಗ 2 ಅನ್ನು ನೀವು ಅನುಸರಿಸಬೇಕೆಂಬುದು ನಿಮಗೆ ಒದಗಿಸಿರುವ ಪರವಾನಗಿಯ ಒಂದು ಷರತ್ತಾಗಿದೆ. Google Maps ಬಳಸುವಾಗ, ನೀವು (ಅಥವಾ ನಿಮ್ಮ ಪರವಾಗಿ ಕಾರ್ಯನಿರ್ವಹಿಸುವವರು) ಇದನ್ನು ಮಾಡಬಾರದು:
Google Maps ನ ಯಾವುದೇ ಭಾಗವನ್ನು ಮರುವಿತರಿಸುವುದು ಅಥವಾ ಮಾರಾಟ ಮಾಡುವುದು ಅಥವಾ Google Maps ಅನ್ನು ಆಧರಿಸಿ ಹೊಸ ಉತ್ಪನ್ನ ಅಥವಾ ಸೇವೆಯನ್ನು ರಚಿಸುವುದು;
ಕಂಟೆಂಟ್ ಅನ್ನು ಕಾಪಿ ಮಾಡಿ (Google Maps, Google Earth ಹಾಗೂ Street View ಬಳಕೆಯ ಅನುಮತಿಗಳ ಪುಟ ಅಥವಾ "ನ್ಯಾಯಯುತ ಬಳಕೆ" ಸೇರಿದ ಹಾಗೆ, ಅನ್ವಯಿಸುವ ಬೌದ್ಧಿಕ ಆಸ್ತಿ ಕಾನೂನಿನ ಅನುಮತಿಯ ಅನುಸಾರ ಇದನ್ನು ಮಾಡಲು ನಿಮಗೆ ಅನುಮತಿ ನೀಡಿರದ ಹೊರತು);
ಸಾಮೂಹಿಕ ಡೌನ್‌ಲೋಡ್ ಅಥವಾ ದೊಡ್ಡ ಪ್ರಮಾಣದಲ್ಲಿ ಕಂಟೆಂಟ್ ಫೀಡ್‍ಗಳನ್ನು ರಚಿಸುವುದು (ಅಥವಾ ಇದನ್ನು ಮಾಡಲು ಇತರರಿಗೆ ಅನುವು ಮಾಡಿಕೊಡುವುದು);
Google Maps ಗೆ ಪರ್ಯಾಯವಾದ ಸೇವೆಗಳಲ್ಲಿ ಅಥವಾ ಅದನ್ನು ಗಮನಾರ್ಹವಾಗಿ ಹೋಲುವ ಸೇವೆಯಲ್ಲಿ ಬಳಸುವುದಕ್ಕಾಗಿ, ಯಾವುದೇ ಇತರ ಮ್ಯಾಪಿಂಗ್-ಸಂಬಂಧಿತ ಡೇಟಾಸೆಟ್ (ಮ್ಯಾಪಿಂಗ್ ಅಥವಾ ನ್ಯಾವಿಗೇಷನ್ ಡೇಟಾಸೆಟ್, ವ್ಯವಹಾರ ಪಟ್ಟಿಗಳ ಡೇಟಾಬೇಸ್, ಮೇಲ್ ಮಾಡುವ ಪಟ್ಟಿ ಅಥವಾ ಟೆಲಿಮಾರ್ಕೆಟಿಂಗ್ ಪಟ್ಟಿಯನ್ನೂ ಸೇರಿಸಿ) ರಚಿಸಲು ಅಥವಾ ವರ್ಧಿಸಲು Google Maps ಅನ್ನು ಬಳಸುವುದು; ಅಥವಾ
Google ಒದಗಿಸುವ, Android Auto ದಂತಹ ನಿರ್ದಿಷ್ಟ ಫೀಚರ್‌ನ ಮೂಲಕವಲ್ಲದೆ, Google Maps ನ ಯಾವುದೇ ಭಾಗವನ್ನು ಇತರ ಜನರ ಉತ್ಪನ್ನಗಳು ಅಥವಾ ಸೇವೆಗಳೊಂದಿಗೆ, ನೈಜ ಸಮಯದ ನ್ಯಾವಿಗೇಷನ್ ಅಥವಾ ಸ್ವಾಯತ್ತ ವಾಹನ ನಿಯಂತ್ರಣಕ್ಕಾಗಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಬಳಸುವುದು.
ವಾಸ್ತವಿಕ ಪರಿಸ್ಥಿತಿಗಳು; ಅಪಾಯದ ಅರಿವು. Google Maps ನ ನಕ್ಷೆ ಡೇಟಾ, ಟ್ರಾಫಿಕ್, ಮಾರ್ಗ ನಿರ್ದೇಶನಗಳು ಮತ್ತು ಇತರ ಕಂಟೆಂಟ್ ಅನ್ನು ಬಳಸುವಾಗ, ನಕ್ಷೆಯ ಫಲಿತಾಂಶಗಳು ಮತ್ತು ಕಂಟೆಂಟ್‌ಗಿಂತ ನೈಜ ಸ್ಥಿತಿಗಳು ಭಿನ್ನವಾಗಿವೆ ಎಂದು ನಿಮಗೆ ಕಂಡುಬರಬಹುದು. ಆದ್ದರಿಂದ, ನಿಮ್ಮ ಸ್ವತಂತ್ರ ವಿವೇಚನೆಯನ್ನು ಬಳಸಿ ಮತ್ತು ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ Google Maps ಬಳಸಿ. ನಿಮ್ಮ ನಡವಳಿಕೆ ಮತ್ತು ಅದರ ಪರಿಣಾಮಗಳಿಗೆ ಎಲ್ಲ ಸಮಯದಲ್ಲೂ ನೀವೇ ಜವಾಬ್ದಾರರಾಗಿರುತ್ತೀರಿ.
Google Maps ನಲ್ಲಿ ನಿಮ್ಮ ಕಂಟೆಂಟ್. Google Maps ನಲ್ಲಿ ನೀವು ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಣೆ ಮಾಡುವ, ಕಳುಹಿಸುವ ಅಥವಾ ಸ್ವೀಕರಿಸುವ ಕಂಟೆಂಟ್, Google ನ ಸೇವಾ ನಿಯಮಗಳು, ಮಾತ್ರವಲ್ಲದೆ “ನಿಮ್ಮ ಕಂಟೆಂಟ್ ಅನ್ನು ಬಳಸುವುದಕ್ಕಾಗಿ ಅನುಮತಿ” ವಿಭಾಗದಲ್ಲಿರುವ ಪರವಾನಗಿಗೂ ಒಳಪಟ್ಟಿರುತ್ತದೆ. ಆದರೂ, ನಿಮ್ಮ ಸಾಧನದಲ್ಲಿ ಪ್ರತ್ಯೇಕವಾಗಿ ಸ್ಥಳೀಯವಾಗಿರುವ ಕಂಟೆಂಟ್ (ಉದಾಹರಣೆಗೆ, ಸ್ಥಳೀಯವಾಗಿ ಸಂಗ್ರಹಣೆ ಮಾಡಲಾಗಿರುವ KML ಫೈಲ್) ಅನ್ನು Google ಗೆ ಅಪ್‌ಲೋಡ್ ಮಾಡದಿರುವ ಅಥವಾ ಸಲ್ಲಿಸದಿರುವ ಕಾರಣ, ಅದು ಆ ಪರವಾನಗಿಗೆ ಒಳಪಟ್ಟಿರುವುದಿಲ್ಲ.
ಸರಕಾರಿ ಅಂತಿಮ ಬಳಕೆದಾರರು. ನೀವು ಸರಕಾರಿ ಘಟಕದ ಪ್ರತಿನಿಧಿಯಾಗಿ Google Maps ಅನ್ನು ಬಳಸುತ್ತಿದ್ದರೆ, ಈ ಕೆಳಗಿನ ನಿಯಮಗಳು ಅನ್ವಯಿಸುತ್ತವೆ:
ಆಡಳಿತಾತ್ಮಕ ಕಾನೂನು.
-
ಯುನೈಟೆಡ್ ಸ್ಟೇಟ್ಸ್ ಮತ್ತು ಐರೋಪ್ಯ ಒಕ್ಕೂಟದಲ್ಲಿನ ಪಟ್ಟಣ ಅಥವಾ ಸ್ಟೇಟ್‍ನ ಸರಕಾರಿ ಅಸ್ತಿತ್ವಗಳಿಗೆ, ಆಡಳಿತಾತ್ಮಕ ಕಾನೂನು ಮತ್ತು ಸ್ಥಳಕ್ಕೆ ಸಂಬಂಧಿಸಿದ Google ಸೇವಾ ನಿಯಮಗಳ ವಿಭಾಗವು ಅನ್ವಯಿಸುವುದಿಲ್ಲ.
-
ಯುನೈಟೆಡ್ ಸ್ಟೇಟ್ಸ್ ಫೆಡರಲ್ ಸರಕಾರಿ ಘಟಕಗಳಿಗಾಗಿ, ಆಡಳಿತಾತ್ಮಕ ಕಾನೂನು ಮತ್ತು ಸ್ಥಳದ ಕುರಿತಾದ Google ಸೇವಾ ನಿಯಮಗಳ ವಿಭಾಗವನ್ನು ಈ ಕೆಳಗಿನ ನಿಯಮದೊಂದಿಗೆ ಬದಲಾಯಿಸಲಾಗುತ್ತದೆ:
“ಕಾನೂನುಗಳ ಸಂಘರ್ಷವನ್ನು ಪರಿಗಣಿಸದೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಕಾನೂನುಗಳ ಅನುಸಾರ ಈ ನಿಯಮಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಅರ್ಥೈಸಿಕೊಳ್ಳಲಾಗುತ್ತದೆ ಹಾಗೂ ಜಾರಿಗೊಳಿಸಲಾಗುತ್ತದೆ. ಫೆಡರಲ್ ಕಾನೂನಿನ ಅನುಮತಿಯ ಮೇರೆಗೆ ಮಾತ್ರ: (ಎ) ಅನ್ವಯವಾಗುವ ಫೆಡರಲ್ ಕಾನೂನು ಇಲ್ಲದಿದ್ದಾಗ, ಸ್ಟೇಟ್ ಆಫ್ ಕ್ಯಾಲಿಫೋರ್ನಿಯಾ ಕಾನೂನುಗಳು (ಕ್ಯಾಲಿಫೋರ್ನಿಯಾದ ಕಾನೂನುಗಳ ಸಂಘರ್ಷದ ನಿಯಮಗಳನ್ನು ಹೊರತುಪಡಿಸಿ) ಅನ್ವಯವಾಗುತ್ತವೆ; ಮತ್ತು (ಬಿ) ಈ ನಿಯಮಗಳಿಗೆ ಅಥವಾ Google Maps ಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ವಿವಾದಕ್ಕಾಗಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಕೌಂಟಿಯಲ್ಲಿನ ಫೆಡರಲ್ ಕೋರ್ಟ್‌ಗಳಲ್ಲಿ ಪ್ರತ್ಯೇಕವಾಗಿ ದಾವೆ ಹೂಡಲಾಗುತ್ತದೆ ಮತ್ತು ಕಕ್ಷಿದಾರರು ಈ ಕೋರ್ಟ್‌ಗಳಲ್ಲಿ ವೈಯಕ್ತಿಕ ಅಧಿಕಾರ ವ್ಯಾಪ್ತಿಗೆ ಸಮ್ಮತಿಸಬೇಕು.”
-
ಯು.ಎಸ್ ಸರಕಾರ ನಿರ್ಬಂಧಿಸಿರುವ ಹಕ್ಕುಗಳು.ಯುನೈಟೆಡ್ ಸ್ಟೇಟ್ಸ್ ಫೆಡರಲ್ ಸರಕಾರದಿಂದ ಅಥವಾ ಯುನೈಟೆಡ್ ಸ್ಟೇಟ್ಸ್ ಫೆಡರಲ್ ಸರಕಾರಕ್ಕಾಗಿ Google Maps ನ ಎಲ್ಲಾ ರೀತಿಯ ಆ್ಯಕ್ಸೆಸ್ ಹಾಗೂ ಬಳಕೆಯು Google Maps/Google Earth ಕಾನೂನು ನೋಟಿಸ್‌ಗಳ "ಯು.ಎಸ್ ಸರಕಾರ ನಿರ್ಬಂಧಿಸಿರುವ ಹಕ್ಕುಗಳ" ವಿಭಾಗಕ್ಕೆ ಒಳಪಟ್ಟಿರುತ್ತದೆ.