ವೈಶಿಷ್ಟ್ಯಗಳ ಅವಲೋಕನ
Google ಇನ್ಪುಟ್ ಪರಿಕರಗಳು ನಿಮ್ಮ ಅಪೇಕ್ಷಿತ ಭಾಷೆಯಲ್ಲಿ ಬಹಳ ಸುಲಭವಾಗಿ ಟೈಪ್ ಮಾಡಲು ನಿಮಗೆ ಸಹಾಯ ಮಾಡಬಹುದು. ನಾವು ಪ್ರಸ್ತುತ ಹಲವಾರು ರೀತಿಯ ಪಠ್ಯ ಇನ್ಪುಟ್ ಪರಿಕರಗಳನ್ನು ಒದಗಿಸುತ್ತೇವೆ:
- IME (ಇನ್ಪುಟ್ ವಿಧಾನ ಸಂಪಾದಕಗಳು) ನಿಮ್ಮ ಕೀಲಿಮಾದರಿಗಳನ್ನು ಪರಿವರ್ತನೆ ಎಂಜಿನ್ ಬಳಸಿಕೊಂಡು ಮತ್ತೊಂದು ಭಾಷೆಗೆ ನಕಾಶೆಗೊಳಿಸುತ್ತದೆ.
- ಲಿಪ್ಯಂತರಣ ಧ್ವನಿಗಳಿಗೆ ಉತ್ತಮವಾಗಿ ಹೊಂದುವಂತಹ ಪಠ್ಯದ ಧ್ವನಿಗಳು/ಭಾಷಾ ಧ್ವನಿಶಾಸ್ತ್ರಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಪರಿವರ್ತಿಸುತ್ತದೆ. ಉದಾಹರಣೆಗೆ, ಲಿಪ್ಯಂತರಣವು “namaste” ಅನ್ನು ಹಿಂದಿಯಲ್ಲಿ “नमस्ते” ಎಂದು ಪರಿವರ್ತಿಸುತ್ತದೆ.
- ನಿಮ್ಮ ವರ್ಚುಯಲ್ ಕೀಬೋರ್ಡ್ನಲ್ಲಿ ಕೀಗಳನ್ನು ನಕಾಶೆಗೊಳಿಸುವಂತಹ ನಿಮ್ಮ ಪರದೆಯ ಮೇಲೆ ಒಂದು ಕೀಬೋರ್ಡ್ ಅನ್ನು ವರ್ಚುಯಲ್ ಕೀಬೋರ್ಡ್ ಪ್ರದರ್ಶಿಸುತ್ತದೆ. ನೀವು ಆನ್-ಸ್ಕ್ರೀನ್ ಕೀಬೋರ್ಡ್ ಲೇಔಟ್ ಆಧಾರದಲ್ಲಿ ಮತ್ತೊಂದು ಭಾಷೆಯಲ್ಲಿ ನೇರವಾಗಿ ಟೈಪ್ ಮಾಡಬಹುದು.
- ನಿಮ್ಮ ಬೆರಳುಗಳಲ್ಲಿ ಅಕ್ಷರಗಳನ್ನು ಚಿತ್ರಿಸುವ ಮೂಲಕ ಪಠ್ಯವನ್ನು ಟೈಪ್ ಮಾಡಲು ಕೈಬರಹ ನಿಮಗೆ ಅನುವು ಮಾಡಿಕೊಡುತ್ತದೆ. ಕೈಬರಹವು ಪ್ರಸ್ತುತ Google ಇನ್ಪುಟ್ ಪರಿಕರಗಳ Chrome ವಿಸ್ತರಣೆ ಯಲ್ಲಿ ಮಾತ್ರ ಲಭ್ಯವಿರುತ್ತದೆ.
Google ಖಾತೆ ಸೆಟ್ಟಿಂಗ್ಗಳಲ್ಲಿ ಇನ್ಪುಟ್ ಪರಿಕರಗಳನ್ನು ಕಾನ್ಫಿಗರ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
Gmail, ಡ್ರೈವ್, ಹುಡುಕಾಟ, ಅನುವಾದ, Chrome, ಮತ್ತು ChromeOS ಸೇರಿದಂತೆ, Google ಉತ್ಪನ್ನಗಳಲ್ಲಿ ಇನ್ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಿರಿ.
ಅದನ್ನು ಪ್ರಯತ್ನಿಸಿ ನೋಡಲು, ನಮ್ಮ ಡೆಮೊ ಪುಟ ಕ್ಕೆ ಹೋಗಿ.