Google ಇನ್‌ಪುಟ್ ಪರಿಕರಗಳ Chrome OS ವಿಸ್ತರಣೆ
Chrome OS ನಲ್ಲಿ ನಿಮ್ಮ ಅಪೇಕ್ಷಿತ ಭಾಷೆಗಳಲ್ಲಿ ಟೈಪ್ ಮಾಡಲು Google ಇನ್‌ಪುಟ್ ಪರಿಕರಗಳ Chrome OS ವಿಸ್ತರಣೆಯು ನಿಮಗೆ ಅನುವು ಮಾಡಿಕೊಡುತ್ತದೆ.
ಈ Chrome OS ವಿಸ್ತರಣೆ ಹಾಗೂ Google ಇನ್‌ಪುಟ್ ಪರಿಕರಗಳ Chrome OS ವಿಸ್ತರಣೆ ಪ್ರಮುಖ ವ್ಯತ್ಯಾಸಗಳೆಂದರೆ:
ವೈಶಿಷ್ಟ್ಯ | Chrome ವಿಸ್ತರಣೆ | Chrome OS ವಿಸ್ತರಣೆ |
---|---|---|
ಬೆಂಬಲಿತ ಪ್ಲ್ಯಾಟ್‌ಫಾರ್ಮ್‌ಗಳು | ಯಾವುದೇ ಕಂಪ್ಯೂಟರ್ (Windows, Mac, Linux) ನಲ್ಲಿ Chrome ಬ್ರೌಸರ್ | Chrome OS ಕಂಪ್ಯೂಟರ್‌ಗಳು ಮಾತ್ರ |
ವಿಳಾಸ ಪಟ್ಟಿಯಲ್ಲಿ (Omnibox) ಕಾರ್ಯನಿರ್ವಹಿಸುವುದೇ? | ಇಲ್ಲ | ಹೌದು |
ಆಫ್‌ಲೈನ್ ಕಾರ್ಯನಿರ್ವಹಿಸುವುದೇ? | ಇಲ್ಲ | ಹೌದು |
ಇನ್‌ಪುಟ್ ಪರಿಕರಗಳನ್ನು Chromebooks ಜೊತೆಗೆ ಜೋಡಿಸಲಾಗಿದೆ. ನೀವು Chromebook ನ ಆವೃತ್ತಿ 28 ಅಥವಾ ಅದಕ್ಕಿಂತ ಹೆಚ್ಚಿನದನ್ನು ಬಳಸುತ್ತಿದ್ದರೆ, ಇನ್‌ಪುಟ್ ಪರಿಕರಗಳನ್ನು ಬಳಸಲು ಸಿದ್ಧರಾಗಿರುವಿರಿ. ಇಲ್ಲದಿದ್ದರೆ, ನಿಮ್ಮ Chromebook ಅಪ್‌ಗ್ರೇಡ್ ಮಾಡಿ. ನೀವು Chromium OS ಬಳಸುತ್ತಿದ್ದರೆ, Chrome ವೆಬ್ ಅಂಗಡಿಯಿಂದ Chrome OS ವಿಸ್ತರಣೆ ಸ್ಥಾಪಿಸಿ.
ಸೆಟ್ಟಿಂಗ್‌ಗಳು → ಸುಧಾರಿತ ಸೆಟ್ಟಿಂಗ್‌ಗಳನ್ನು ತೋರಿಸು → ಭಾಷೆಗಳು ಗೆ ಹೋಗಿ. "ಭಾಷೆ ಹಾಗೂ ಇನ್‌ಪುಟ್ ಸೆಟ್ಟಿಂಗ್‌ಗಳು" ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಬಳಸಲು ಬಯಸುವ ಇನ್‌ಪುಟ್ ಪರಿಕರ(ಗಳು) ಆಯ್ಕೆ ಮಾಡಿ. [ಸ್ಥಳೀಯ ಭಾಷೆಯಲ್ಲಿ ಭಾಷೆಯ ಹೆಸರು] ([Chrome UI ಭಾಷೆಯಲ್ಲಿ ಭಾಷೆಯ ಹೆಸರು]) ಉದಾ. हिन्दी (Hindi), ದಂತೆ ಲೇಬಲ್ ಮಾಡಲಾಗಿರುವ ಇನ್‌ಪುಟ್ ವಿಧಾನಗಳು, ಇನ್‌ಪುಟ್ ಪರಿಕರಗಳ ಲಿಪ್ಯಂತರದ ಬಗೆಯನ್ನು ಸೂಚಿಸುತ್ತವೆ ಎಂಬುದನ್ನು ಗಮನಿಸಿ. ಲಿಪ್ಯಂತರಣದ ಪರಿಕರಗಳು ನಿಮ್ಮ ಇನ್‌ಪುಟ್ ಅನ್ನು ಉಚ್ಛಾರಣಾ ಅನುಸಾರವಾಗಿ ಉದ್ದೇಶಿತ ಭಾಷೆಗೆ ಪರಿವರ್ತಿಸುತ್ತದೆ.
ಕಾನ್ಫಿಗರೇಶನ್ ನಂತರ, ನೀವು ಬಯಸುವ ಇನ್‌ಪುಟ್ ವಿಧಾನದಲ್ಲಿ ಟಾಗಲ್ ಮಾಡಿ. ಪ್ರಸ್ತುತ ಬಳಸುವ ಇನ್‌ಪುಟ್ ವಿಧಾನದ ಮೇಲೆ ಕ್ಲಿಕ್ ಮಾಡಿ, ಉದಾ., ಲಾಂಚರ್ ಮೇಲೆ “US” (ಅಂದರೆ, ನಿಮ್ಮ ಪರದೆಯ ಕೆಳಗಿನ ಬಲಭಾಗದಲ್ಲಿರುವ ಅಧಿಸೂಚನೆ ಪಟ್ಟಿ/ಫಲಕ).
ಆಯ್ದ ಇನ್‌ಪುಟ್ ವಿಧಾನಗಳ ಒಂದು ಪಟ್ಟಿಯನ್ನು (ವಿಸ್ತರಣೆಯ ಇನ್‌ಪುಟ್ ಪರಿಕರಗಳು ಒಳಗೊಂಡು) ತೋರಿಸುತ್ತದೆ. ನೀವು ಬಳಸಲು ಬಯಸುವ ಇನ್‌ಪುಟ್ ಪರಿಕರಣ ಆಯ್ಕೆ ಮಾಡಿ. ಹೊಸ ಇನ್‌ಪುಟ್ ಪರಿಕರಣವನ್ನು ಸೇರಿಸಲು, “ಭಾಷೆಗಳು ಹಾಗೂ ಇನ್‌ಪುಟ್ ಅನ್ನು ಕಸ್ಟಮೈಜ್ ಮಾಡಿ ...”
ಇದೀಗ ನೀವು ಇನ್‌ಪುಟ್ ಪರಿಕರಣವನ್ನು ಆಯ್ಕೆ ಮಾಡಿರುವಿರಿ, ಯಾವುದೇ ಇನ್‌ಪುಟ್ ಪೆಟ್ಟಿಗೆಗೆ (ಓಮ್ನಿಬಾಕ್ಸ್ ಅನ್ನು ಸಹ ಬೆಂಬಲಿಸಲಾಗುತ್ತದೆ) ಕರ್ಸರ್ ಅನ್ನು ಸರಿಸಿ, ನೀವು ಟೈಪ್ ಮಾಡುವುದನ್ನು ಪ್ರಾರಂಭಿಸಬಹುದು.
ವೈಯಕ್ತಿಕ ಇನ್‌ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದರ ಕುರಿತ ಲೇಖನಗಳು: