Google ಡ್ರೈವ್/ಡಾಕ್ಸ್

Google ಡ್ರೈವ್/ಡಾಕ್ಸ್‌ನಲ್ಲಿ ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ತ್ವರಿತವಾಗಿ ತಿಳಿಯಲು ಕೆಳಗಿನ ವೀಡಿಯೊವನ್ನು ಪರಿಶೀಲಿಸಿ.

Google ಡ್ರೈವ್‌ನಲ್ಲಿ ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸಲು ಮೂರು ಮಾರ್ಗಗಳಿವೆ:

  1. ನೀವು ಟೈಪ್ ಮಾಡಲು ಬಯಸುವ ಭಾಷೆಗೆ ಬಳಕೆದಾರರ ಭಾಷೆ ಸೆಟ್ಟಿಂಗ್ ಅನ್ನು ಬದಲಾಯಿಸಿ. ಅದನ್ನು ಮಾಡಲು ಈ ಸೂಚನೆಗಳನ್ನು ಅನುಸರಿಸಿ.
  2. ನೀವು ಟೈಪ್ ಮಾಡಲು ಬಯಸುವ ಭಾಷೆಗೆ ಡಾಕ್ಯುಮೆಂಟ್‌ನ ಭಾಷೆ ಸೆಟ್ಟಿಂಗ್ ಅನ್ನು ಬದಲಾಯಿಸಿ. ಇದನ್ನು ಮಾಡಲು, ಹೊಸ ಡಾಕ್ಯುಮೆಂಟ್ ರಚಿಸಿ ಅಥವಾ ಅಸ್ತಿತ್ವದಲ್ಲಿರುವ ಡಾಕ್ಯುಮೆಂಟ್‌ ತೆರೆಯಿರಿ. ಫೈಲ್‌ → ಭಾಷೆಗೆ ಹೋಗಿ. ನಂತರ, ನೀವು ಬಳಸಲು ಬಯಸುವ ಭಾಷೆಯನ್ನು ಆಯ್ಕೆಮಾಡಿ.
  3. Gmail ನಲ್ಲಿ ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸಿ.

ಇನ್‌ಪುಟ್ ಪರಿಕರಗಳನ್ನು ಒಮ್ಮೆ ಸಕ್ರಿಯಗೊಳಿಸಿದಲ್ಲಿ, ಪರಿಕರಪಟ್ಟಿಯ ಬಲಭಾಗದಲ್ಲಿ (ಅಥವಾ RTL ಪುಟದ ಎಡಭಾಗದಲ್ಲಿ) ಐಕಾನ್ ಒಂದನ್ನು ನೀವು ಕಾಣುವಿರಿ.

ವೈಯಕ್ತಿಕ ಇನ್‌ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದರ ಕುರಿತ ಲೇಖನಗಳು:

ಸಂಬಂಧಿತ ಗೂಗಲ್ ಬ್ಲಾಗ್ ಪೋಸ್ಟ್‌ಗಳು: