ಕೈಬರಹ
ಮೌಸ್ ಅಥವಾ ಟ್ರಾಕ್‌ಪ್ಯಾಡ್‌ನಿಂದ ನೇರವಾಗಿ ಪದಗಳನ್ನು ಬರೆಯಲು ಕೈಬರಹದ ಇನ್‌ಪುಟ್ ನಿಮಗೆ ಅನುಮತಿಸುತ್ತದೆ. 50 ಕ್ಕೂ ಹೆಚ್ಚಿನ ಭಾಷೆಗಳನ್ನು ಕೈ ಬರಹ ಬೆಂಬಲಿಸುತ್ತದೆ.
ಕೈಬರಹ ಇನ್‌ಪುಟ್ ಬಳಸಲು, ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸುವುದು ಮೊದಲ ಹಂತವಾಗಿರುತ್ತದೆ. ಹುಡುಕಾಟ, Gmail, Google ಡ್ರೈವ್, Youtube, ಅನುವಾದ, Chrome ಮತ್ತು Chrome OS ರಲ್ಲಿ ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸಲು ಸೂಚನೆಗಳನ್ನು ಅನುಸರಿಸಿ. ಮೇಲಿನ ಕೆಲವು ಉತ್ಪನ್ನಗಳಲ್ಲಿ ಕೆಲವು ಭಾಷೆಗಳ ಕೈಬರಹದ ಇನ್‌ಪುಟ್ ಲಭ್ಯವಿಲ್ಲದಿರಬಹುದು ಎನ್ನುವುದನ್ನು ಗಮನಿಸಿ.
ಕೈಬರಹದ ಇನ್‌ಪುಟ್ ಪರಿಕರಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಲು Google ಇನ್‌ಪುಟ್ ಪರಿಕರಗಳ Chrome ವಿಸ್ತರಣೆ ಯಲ್ಲಿ ಈ ಟ್ಯುಟೋರಿಯಲ್ ವೀಡಿಯೊ ನೋಡಿ.
ಕೈಬರಹ ಇನ್‌ಪುಟ್ ಅನ್ನು ಪೆನ್ಸಿಲ್ ಮೂಲಕ ಪ್ರತಿನಿಧಿಸಲಾಗಿದೆ .ಕೈಬರಹದ ಇನ್‌ಪುಟ್ ಬಳಸುವಾಗ,
ನಿಮ್ಮ ಟ್ರಾಕ್‌ಪ್ಯಾಡ್ ಅಥವಾ ಮೌಸ್ ಅನ್ನು ಕೈಬರಹದ ಫಲಕಕ್ಕೆ ಸರಿಸಿ. ಅಕ್ಷರಗಳನ್ನು ರಚಿಸಲು
ಟ್ರ್ಯಾಕ್‌ಪ್ಯಾಡ್/ಮೌಸ್ ಅನ್ನು ಒತ್ತಿಕೊಂಡೇ ಇರಿ. ಅಭ್ಯರ್ಥಿಯ ಅಕ್ಷರಗಳು ನಿಮ್ಮ ಕೈಬರಹ ಮ್ಯಾಪಿಂಗ್
ಅನ್ನು ಪ್ರದರ್ಶಿಸುತ್ತವೆ. ಅಕ್ಷರದಲ್ಲಿ ಕ್ಲಿಕ್ ಮಾಡುವ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಅಥವಾ ಮೊದಲ
ಅಭ್ಯರ್ಥಿಯನ್ನು ಆಯ್ಕೆ ಮಾಡಲು ENTER ಅಥವಾ SPACE ಕೀಯನ್ನು ಒತ್ತಿ.