Gmail

Gmail ನಲ್ಲಿ ಇನ್‌ಪುಟ್ ಪರಿಕರಗಳನ್ನು ಹೊಂದಿಸುವುದು ಹೇಗೆ ಎಂಬುದನ್ನು ತ್ವರಿತವಾಗಿ ತಿಳಿಯಲು ಈ ವೀಡಿಯೊವನ್ನು ಪರಿಶೀಲಿಸಿ.

Gmail ನಲ್ಲಿ ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸಲು, ಕೆಳಗಿನ ಈ ಹಂತಗಳನ್ನು ಅನುಸರಿಸಿ:

  1. ಮೇಲಿನ ಬಲಭಾಗದಲ್ಲಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ, ನಂತರ “ಸೆಟ್ಟಿಂಗ್‌ಗಳು” ಆಯ್ಕೆಮಾಡಿ.
  2. ಸಾಮಾನ್ಯ ಟ್ಯಾಬ್‌ನಲ್ಲಿ, "ಭಾಷೆ" ವಿಭಾಗದ ಅಡಿಯಲ್ಲಿನ "ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸಿ" ಮುಂದಿರುವ ಚೆಕ್ ಬಾಕ್ಸ್ ಅನ್ನು ಆಯ್ಕೆಮಾಡಿ.
  3. ಅಲ್ಲಿ ಕಾಣಿಸಿಕೊಳ್ಳುವ "ಇನ್‌ಪುಟ್ ಪರಿಕರಗಳು" ಸೆಟ್ಟಿಂಗ್ ಸಂವಾದದಲ್ಲಿ, "ಎಲ್ಲಾ ಇನ್‌ಪುಟ್ ಪರಿಕರಗಳು" ಕ್ಷೇತ್ರದಿಂದ ನೀವು ಬಯಸುವ ಇನ್‌ಪುಟ್ ಪರಿಕರವನ್ನು ಆಯ್ಕೆಮಾಡಿ ಮತ್ತು "ಆಯ್ಕೆಮಾಡಿದ ಇನ್‌ಪುಟ್ ಪರಿಕರಗಳು" ಕ್ಷೇತ್ರದಲ್ಲಿ ಇದು ಕಾಣಿಸಿಕೊಳ್ಳುವಂತೆ ಬೂದುಬಣ್ಣದ ಬಾಣವನ್ನು ಕ್ಲಿಕ್ ಮಾಡಿ.
    • ಆಯ್ಕೆಮಾಡಿದ ಇನ್‌ಪುಟ್ ಪರಿಕರಗಳು" ಕ್ಷೇತ್ರದಲ್ಲಿ ಇದನ್ನು ಸೇರಿಸಲು ನೀವು ಇನ್‌ಪುಟ್ ಪರಿಕರವನ್ನು ಡಬಲ್ ಕ್ಲಿಕ್ ಮಾಡಬಹುದು
    • ಕಾಣಿಸುವ ಪರಿಕರವನ್ನು ಕ್ಲಿಕ್ ಮಾಡುವ ಮೂಲಕ ಮತ್ತು ಮೇಲೆ/ಕೆಳಗೆ ಬಾಣವನ್ನು ಕ್ಲಿಕ್ ಮಾಡುವ ಮೂಲಕ ಆಯ್ಕೆಮಾಡಿದ ಇನ್‌ಪುಟ್ ಪರಿಕರಗಳನ್ನು ನೀವು ಮರುಕ್ರಮಗೊಳಿಸಬಹುದು
  4. ಸೆಟ್ಟಿಂಗ್ ಸಂವಾದದಲ್ಲಿ ಸರಿ ಕ್ಲಿಕ್ ಮಾಡಿ
  5. ಸಾಮಾನ್ಯ ಟ್ಯಾಬ್‌ನ ಕೆಳಗಿರುವ ಬದಲಾವಣೆಗಳನ್ನು ಉಳಿಸಿ ಅನ್ನು ಕ್ಲಿಕ್ ಮಾಡಿ

ನೀವು ಒಮ್ಮೆ ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸಿದಲ್ಲಿ, ಗೇರ್ ಐಕಾನ್‌ನ ಎಡಬದಿಯಲ್ಲಿ ಇನ್‌ಪುಟ್ ಪರಿಕರಗಳ ಐಕಾನ್ ಅನ್ನು ನೀವು ನೋಡಬಹುದು, ಉದಾ. .

ಈ Gmail ಬ್ಲಾಗ್ ಪೋಸ್ಟ್ (Google ಹಾಗೂ ಎಂಟರ್‌ಪ್ರೈಸ್ ಬ್ಲಾಗ್‌ಗಳಲ್ಲಿ ಕ್ರಾಸ್‌-ಪೋಸ್ಟ್ ಮಾಡಲಾಗಿದೆ) Gmail ನಲ್ಲಿ ಇನ್‌ಪುಟ್ ಪರಿಕರಗಳು ಭಾಷೆಗಳಾದ್ಯಂತ ಸಂವಹನವನ್ನು ಹೇಗೆ ಸುಲಭಗೊಳಿಸುತ್ತವೆ ಎಂಬುದನ್ನು ಪರಿಚಯಿಸುತ್ತದೆ.

ವೈಯಕ್ತಿಕ ಇನ್‌ಪುಟ್ ಪರಿಕರಗಳನ್ನು ಬಳಸುವುದು ಹೇಗೆ ಎಂಬುದರ ಕುರಿತ ಲೇಖನಗಳು: