ವರ್ಚುಯಲ್ ಕೀಬೋರ್ಡ್

ನೀವು ಎಲ್ಲಿಯೇ ಇರಿ ಅಥವಾ ಯಾವುದೇ ಕಂಪ್ಯೂಟರ್ ಅನ್ನು ಬಳಸುತ್ತಿರಿ, ವರ್ಚುವಲ್‌ ಕೀಬೋರ್ಡ್‌, ಅಥವಾ "ಆನ್-ಸ್ಕ್ರೀನ್" ಕೀಬೋರ್ಡ್.ನಿಮ್ಮನ್ನು ನೇರವಾಗಿ ನಿಮ್ಮ ಸ್ಥಳೀಯ ಭಾಷೆಯ ಸ್ಕ್ರಿಪ್ಟ್‌ನಲ್ಲಿ ಸುಲಭವಾಗಿ ಹಾಗೂ ಸ್ಥಿರವಾದ ರೀತಿಯಲ್ಲಿ ಟೈಪ್ ಮಾಡಲು ಅನುಮತಿಸುತ್ತದೆ. ವರ್ಚುಯಲ್ ಕೀಬೋರ್ಡ್‌ಗಳು ಕೆಲವು ಸಾಮಾನ್ಯ ಬಳಕೆಗಳನ್ನು ಒಳಗೊಂಡಿವೆ:

ವರ್ಚುವಲ್‌ ಕೀಬೋರ್ಡ್ 70 ಭಾಷೆಗಳಾದ್ಯಾಂತ 100 ಕೀಬೋರ್ಡ್‌ಗಳನ್ನು ಒಳಗೊಂಡಿದೆ. ವರ್ಚುವಲ್‌ ಕೀಬೋರ್ಡ್ ಅನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಲು ಈ ಟ್ಯುಟೋರಿಯಲ್ ವೀಡಿಯೊವನ್ನು ಪರಿಶೀಲಿಸಿ. ಅದನ್ನು ಆನ್‌ಲೈನ್‌ನಲ್ಲಿ ಸಹ ಪ್ರಯತ್ನಿಸಿ.

ವರ್ಚುವಲ್‌ ಕೀಬೋರ್ಡ್ ಬಳಸಲು, ಇನ್‌ಪುಟ್ ಪರಿಕರಗಳನ್ನು ಸಕ್ರಿಯಗೊಳಿಸುವುದು ಮೊದಲ ಹಂತವಾಗಿರುತ್ತದೆ. ಹುಡುಕಾಟ, Gmail, Google ಡ್ರೈವ್‌, Youtube, ಅನುವಾದ, Chrome ಮತ್ತು Chrome OS ರಲ್ಲಿ ಇನ್‌ಪುಟ್‌ ಪರಿಕರಗಳನ್ನು ಸಕ್ರಿಯಗೊಳಿಸಲು ಸೂಚನೆಗಳನ್ನು ಅನುಸರಿಸಿ.

ವರ್ಚುಯಲ್ ಕೀಬೋರ್ಡ್ ಅನ್ನು ಕೀಬೋರ್ಡ್ ಐಕಾನ್ ನಿಂದ ಪ್ರತಿನಿಧಿಸಲಾಗುತ್ತದೆ. ಪ್ರಸ್ತುತ IME ಅನ್ನು ಟಾಗಲ್ ಆನ್/ಆಫ್ ಮಾಡಲು ಐಕಾನ್ ಮೇಲೆ ಕ್ಲಿಕ್ ಮಾಡುವುದು ಅಥವಾ ಬೇರೊಂದು ಇನ್‌ಪುಟ್ ಪರಿಕರ ಆಯ್ಕೆ ಮಾಡಲು ಮುಂದಿನ ಬಾಣದ ಮೇಲೆ ಕ್ಲಿಕ್‌ ಮಾಡುವುದು. ವರ್ಚುಯಲ್ ಕೀಬೋರ್ಡ್ ಅನ್ನು ಸಕ್ರಿಯಗೊಳಿಸಿದಾಗ, ಬಟನ್ ಗಾಢವಾದ ಬೂದು ಬಣ್ಣಕ್ಕೆ ತಿರುಗುತ್ತದೆ .

ನಿಮ್ಮ ಸ್ವಂತ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದರ ಮೂಲಕ ವರ್ಚುಯಲ್ ಕೀಬೋರ್ಡ್‌ನಂತೆಯೇ ಅಥವಾ ನಿಮ್ಮ ಮೌಸ್‌ನೊಂದಿಗೆ ವರ್ಚುಯಲ್ ಕೀಬೋರ್ಡ್ ಅನ್ನು ನೇರವಾಗಿ ಕ್ಲಿಕ್ ಮಾಡುವ ಮೂಲಕ ವರ್ಚುಯಲ್ ಕೀಬೋರ್ಡ್ ಬಳಸಿ.

ಆನ್‌-ಸ್ಕ್ರೀನ್‌ ಕೀಬೋರ್ಡ್ ಅನ್ನು ಕುಗ್ಗಿಸಲು, ಮೇಲಿನ ಬಲ ಭಾಗದ ಆನ್‌-ಸ್ಕ್ರೀನ್‌ ಕೀಬೋರ್ಡ್‌ನ ಬಾಣವನ್ನು ಕ್ಲಿಕ್ ಮಾಡಿ.